ಮುಳ್ಳುಸೌತೆ ಕಡುಬು
ಬೇಕಿರುವ ಸಾಮಗ್ರಿ
ನೆನೆಸಿದ ಅಕ್ಕಿ ೨ ಕಪ್, ಸಣ್ಣಗೆ ಹೆಚ್ಚಿದ ಮುಳ್ಳುಸೌತೆ ೪ ಕಪ್, ಉಪ್ಪು ರುಚಿಗೆ ತಕ್ಕಷ್ಟು, ಬಾಳೆಲೆ ತುಂಡು ೧೦.
ತಯಾರಿಸುವ ವಿಧಾನ
ನೆನೆಸಿದ ಅಕ್ಕಿಯನ್ನು ನೀರು ಸೇರಿಸದೆ ಒಂದು ಕಪ್ ಮುಳ್ಳುಸೌತೆ ಹೋಳು, ಉಪ್ಪು ಸೇರಿಸಿ ಬಾಂಬೆ ರವೆಯ ಹದಕ್ಕೆ ರುಬ್ಬಿ. ಈ ಹಿಟ್ಟಿಗೆ ಉಳಿದ ಮುಳ್ಳುಸೌತೆ ಹೋಳು ಬೆರೆಸಿ. ನಂತರ ಬಾಡಿಸಿದ ಬಾಳೆಲೆಯ ಮೇಲೆ ಈ ಮಿಶ್ರಣವನ್ನು ಎರಡು ಸೌಟು ಹಾಕಿ ಬಾಳೆಲೆ ಮಡಚಿ ಒಂದು ಗಂಟೆ ಹಬೆಯಲ್ಲಿ ಬೇಯಿಸಿ. ಕಾಯಿಚಟ್ನಿಯೊಂದಿಗೆ ಸವಿಯಿರಿ.
- ಸಹನಾ ಕಾಂತಬೈಲು, ಬಾಲಂಬಿ