ಮುಳ್ಳುಸೌತೆ ಸಿಹಿ ಅಪ್ಪ

ಮುಳ್ಳುಸೌತೆ ಸಿಹಿ ಅಪ್ಪ

ಬೇಕಿರುವ ಸಾಮಗ್ರಿ

ಬೆಳ್ತಿಗೆ ಅಕ್ಕಿ ೨ ಕಪ್, ತೆಂಗಿನ ತುರಿ ೧/೨ ಕಪ್, ಬೆಲ್ಲ ೩ ಅಚ್ಚು, ಉಪ್ಪು ಚಿಟಿಕೆ, ತುಪ್ಪ ೧/೨ ಕಪ್.

ತಯಾರಿಸುವ ವಿಧಾನ

ಅಕ್ಕಿಯನ್ನು ೨ ಗಂಟೆ ನೆನೆಸಿ. ನಂತರ ತೊಳೆದು ಸಿಪ್ಪೆ ಮತ್ತು ತಿರುಳನ್ನು ತೆಗೆದು ಸಣ್ಣಗೆ ಹೆಚ್ಚಿದ ಮುಳ್ಳುಸೌತೆ ಮತ್ತು ತೆಂಗಿನ ತುರಿಯನ್ನು ಸೇರಿಸಿ ನೀರು ಹಾಕದೆ ನುಣ್ಣಗೆ ರುಬ್ಬಿ. ನಂತರ ಬೆಲ್ಲ, ಉಪ್ಪು ಸೇರಿಸಿ ರುಬ್ಬಿ. ನಂತರ ಬಾಣಲೆಗೆ ಹಾಕಿ ಸ್ವಲ್ಪ ಹೊತ್ತು ಸ್ವಲ್ಪ ಗಟ್ಟಿಯಾಗುವವರೆಗೆ ಮಗುಚಿ. ನಂತರ ಅಪ್ಪದ ಕಾವಲಿ ಗುಳಿಗೆ ತುಪ್ಪ ಹಾಕಿ, ಬಿಸಿಯಾದಾಗ ಹಿಟ್ಟು ಹಾಕಿ. ಬೆಂದು ತಳ ಬಿಟ್ಟಾಗ ಅಪ್ಪದ ಕಡ್ಡಿಯಿಂದ ಚುಚ್ಚಿ ಕವುಚಿ ಹಾಕಿ ಬೇಯಿಸಿ. ಕೆಂಪಗೆ ಆದಾಗ ತೆಗೆದು ಪಾತ್ರೆಗೆ ಹಾಕಿ. ಬಿಸಿಬಿಸಿ ತಿನ್ನಲು ಮತ್ತು ತಣಿದ ಮೇಲೂ ತಿನ್ನಲು ಚೆನ್ನಾಗಿರುತ್ತದೆ.

- ಸಹನಾ ಕಾಂತಬೈಲು, ಮಡಿಕೇರಿ