ಮುಳ್ಳು ಹರಿವೆ ಸೊಪ್ಪು
ಮುಳ್ಳು ಹರಿವೆ ಸೊಪ್ಪಿನ ಔಷದದ ಗುಣ ಬಹಳ ಮಂದಿಗೆ ತಿಳಿದಿರಲಿಕ್ಕಿಲ್ಲ. ಎಂತಹ ವ್ರಣವೇ ಆಗಲಿ ಕುರುವೇ ಆಗಲಿ ಹೇಳ ಹೆಸರಿಲ್ಲದಂತೆ 2-3 ದಿನಗಳ್ಲಿ ನಾಶ ಮಾಡುವ ಗುಣ ಈ ಸೊಪ್ಪಿನಲ್ಲಿದೆ. ಈ ಸೊಪ್ಪನ್ನು ಅರೆದು ಮೊಸರಿನಲ್ಲಿ ಕಲೆಸಿ ಹುಣ್ಣಾಗಿರುವ ಅಥವ ಕುರು ಇರುವ ಅಥವ ವ್ರಣ ಇರುವ ಜಾಗಕ್ಕೆ ಪೋಟ್ಲೀಸ್ ನಂತೆ ಅಂಟಿಸಿ ಕೂರಿಸಬೇಕು. ದಿನಕ್ಕೆ 2 ಅಥವ 3 ಬಾರಿ ಈ ರೀತಿ ಮಾಡಿದರೆ ಸಾಕು. ಗಾಯದ ಗುರುತೂ ಇಲ್ಲದಂತೆ ವಾಸಿಯಾಗುತ್ತದೆ.
Mandagadde Shankar