ಮುಳ್ಳೇ ಮುಳ್ಳೂ...ಮೈಯೆಲ್ಲಾ ಮುಳ್ಳೇ ಮುಳ್ಳು!!!!!!

ಮುಳ್ಳೇ ಮುಳ್ಳೂ...ಮೈಯೆಲ್ಲಾ ಮುಳ್ಳೇ ಮುಳ್ಳು!!!!!!

ಬರಹ

ಮುಳ್ಳೇ ಮುಳ್ಳೂ...ಮೈಯೆಲ್ಲಾ ಮುಳ್ಳೇ ಮುಳ್ಳು!!!!!!--- ಗ್ರಾಮೀಣ ಹಿನ್ನೆಲೆಯವರಾಗಿದ್ದರೆ,ಅದರಲ್ಲೂ ಕುರಿ,ಮೇಕೆಗಳನ್ನು ಮೇಯಿಸಿ ಅನುಭವವಿದ್ದರೆ,ಎಲ್ಲಾದರೂ ಒಮ್ಮೆಯಾದರೂ ಈ ಮುಳ್ಳುಹುಳುವಿನ ದರ್ಶನ ಭಾಗ್ಯ ಸಿಕ್ಕಿರಲೇ ಬೇಕು.ಹೆಚ್ಹಾಗಿ ಕರಿ ಜಾಲಿ ಗಿಡಗಳಲ್ಲಿ ಈ ಹುಳು ಕಾಣಸಿಗುತ್ತದೆ.
ಏನಿದರ ವೈಶಿಷ್ಟ್ಯ ಗೊತ್ತೇ???
ಕಡ್ಡಿಹುಳುಗಳ (praying mantis)ಅನೇಕ ಪ್ರಭೇಧಗಳನ್ನು ನಾವು ನಿಸರ್ಗದಲ್ಲಿ ಕಾಣುತ್ತೇವೆ.ನನಗನಿಸಿದಂತೆ ಮುಳ್ಳು ಹುಳುವಿನ ಪ್ರಭೇಧ ಇದೊಂದೇ ಇರಬಹುದೇನೋ,ತಿಳಿಯದು.ಅಪಾರ ಮುಳ್ಳುಗಳಿಂದಾವರಿಸಿದ ಜಾಲಿ ಗಿಡಗಳ ಎತ್ತರದ ಕೊಂಬೆಗಳಲ್ಲಿ ಇದರ ವಾಸ.ಮುಟ್ಟಲೂ ಸಹ ಮುಳ್ಳುಗಳ ಹಂದರವನ್ನೇ ದಾಟಿ ಕೈಹಾಕಿ ಕೀಳಬೇಕಾಗುತ್ತದೆ.ಸುಲಭವಾಗಿ ಕೀಳಲು ಸಹಾ ಆಗದು.ಅದೊಂದು ರೀತಿಯ ಅಂಟಿನ ದಾರದ ಜೊತೆ ನಂಟು ಸಾಧಿಸುವ ಈ ಹುಳು ದಾರದ ಸಹಕಾರದೊಂದಿಗೆ ರೆಂಬೆಯಲ್ಲಿ ನೇತಾಡುತ್ತಿರುತ್ತದೆ.
ಔಷಧೀಯ ಗುಣಗಳು.

ಮೈಮೇಲಿನ ಮುಳ್ಳು ಪದರವನ್ನು ತೆಗೆದರೆ ಒಳಗಡೆ ಹಸಿರಿ ಬಣ್ಣದ ಹುಳು ಇರುತ್ತದೆ.ಇದನ್ನು ಅರೆದು ಹುಳೂಕಡ್ಡಿ(ಎಕ್ಸಿಮ)ಗೆ ಹಚ್ಚುವ ಪದ್ದತಿ ನಮ್ಮ ಭಾಗದಲ್ಲಿದೆ.ನನ್ನಕ್ಕ ಶಾರದಳ ಕೆನ್ನೆಯ ಮೇಲಿನ ಹುಳುಕಡ್ಡಿ ಇದರಿಂದಲೇ ವಾಸಿಯಾಗಿದ್ದು ನನಗೆ ನೆನಪಿದೆ.
ಕೊಪ್ಪಳದ ಕಡೆ ಚಿಕ್ಕಮಕ್ಕಳಿಗೆ ಈ ಹುಳುವಿನ ತಾಯತ ಮಾಡಿ ಹಾಕುತ್ತರಂತೆ.ಪಾವಗಡ ತಾಲ್ಲೂಕಿನ ವೆಂಕಟಾಪುರ ಗ್ರಾಮದ ಕೆರೆಯಲ್ಲಿ ಇದನ್ನು ಮೊನ್ನೆ ನೋಡಿ ಸಂಪದಿಗರಿಗಾಗಿ ಚಿತ್ರ ತೆಗೆದು ಹಾಕಿದ್ದೇನೆ.ಹುಳುವಿನ zoological name ತಿಳಿದಿಲ್ಲ.