ಮೂಕ ಹಕ್ಕಿಯ ಹಾಡು (ಪಾಕಿಸ್ತಾನದ ಹೆಣ್ಣು ಮಗಳು ಮುಖ್ತಾರ್ ಮಾಯಿಯ ಆತ್ಮಕತೆ)

ಮೂಕ ಹಕ್ಕಿಯ ಹಾಡು (ಪಾಕಿಸ್ತಾನದ ಹೆಣ್ಣು ಮಗಳು ಮುಖ್ತಾರ್ ಮಾಯಿಯ ಆತ್ಮಕತೆ)

ಪುಸ್ತಕದ ಲೇಖಕ/ಕವಿಯ ಹೆಸರು
ಇಂಗ್ಲಿಷ್ ಮೂಲ : ಮುಖ್ತಾರ್ ಮಾಯಿ ಕನ್ನಡಕ್ಕೆ : ಡಾ. ಎನ್. ಜಗದೀಶ್ ಕೊಪ್ಪ
ಪ್ರಕಾಶಕರು
ಲಡಾಯಿ ಪ್ರಕಾಶನ, ಗದಗ
ಪುಸ್ತಕದ ಬೆಲೆ
ಬೆಲೆ : ರೂ 110/-

 “ಮೂಕ ಹಕ್ಕಿಯ ಹಾಡು” ಕೃತಿಯು ಮುಖ್ತಾರ್ ಮಾಯಿಯ ತೀರಾ ಭಿನ್ನವಾದ ದಾರುಣ ಬದುಕನ್ನು ನಮ್ಮ ಮುಂದೆ ತೆರೆದಿಡುವ ಕೃತಿಯಾಗಿದೆ. 

ಪಾಕಿಸ್ತಾನದ ಕೆಳವರ್ಗದ ಕೃಷಿ ಕುಟುಂಬದಲ್ಲಿ ಬೆಳೆದ ಅನಕ್ಷರಸ್ಥ ಹೆಣ್ಣು ಮಗಳು ಮುಖ್ತಾರ್ ಮಾಯಿ ಸಾಮೂಹಿಕ ಅತ್ಯಾಚಾರದಂತಹ ಕ್ರೌರ್ಯಕ್ಕೆ ಬಲಿಯಾದ ನಂತರ ಅನುಭವಿಸುವ ತೊಳಲಾಟಗಳನ್ನೆಲ್ಲಾ ಮೀರಿಯೂ ಆಕೆ ತೆಗೆದುಕೊಳ್ಳುವ ಪ್ರತಿಯೊಂದು ನಿರ್ಧಾರದ ಹಿಂದೆ ದೂರ ದೃಷ್ಟಿ ಮತ್ತು ಪ್ರಬುದ್ಧತೆ ಇದೆ.

ತನ್ನ ಹಳ್ಳಿಯಲ್ಲಿ ಶಾಲೆ ಆರಂಭಿಸಿದ ಆಕೆ, ಶಾಲೆಗೆ ಸಿಕ್ಕಿದ ಪರಿಹಾರದ ಹಣವನ್ನು ಉಪಯೋಗಿಸುವ ರೀತಿಯಲ್ಲೇ ಅವಳ ದೂರದೃಷ್ಟಿ ಪರಿಚಯವಾಗುತ್ತದೆ. ಯಾವುದೇ ಪದ ವೈಭವಗಳಿಲ್ಲದೆ ತಾನು ಕೊನೆಯಲ್ಲಿ ಸಾಧಿಸಿದ ಎತ್ತರದ ಬಗ್ಗೆ ಅಹಂಕಾರವಿಲ್ಲದ ನಿವೇದನೆಯ ಧಾಟಿಯಲ್ಲಿ ಮುಖ್ತಾರ್ ಮಾಯಿ ಕೊನೆಯವರೆಗೂ ಹೇಳುತ್ತಾ ಹೋಗುತ್ತಾಳೆ. ಇಂತಹ ಕೃತಿಗಳು ಜಗತ್ತಿನ ಎಲ್ಲಾ ಭಾಷೆಗಳಲ್ಲಿ ಶೋಷಿತರ ಕೈಗೆ ಓದಲು ಸಿಗುವುದರಿಂದ ಅವರಿಗೆ ಆತ್ಮಸ್ಥೈರ್ಯವನ್ನು ಹೆಚ್ಚಿಸುವ ಊರುಗೋಲಾಗಬಹುದು. ೧೨೪ ಪುಟಗಳನ್ನು ಹೊಂದಿರುವ ಕೃತಿ ಎಲ್ಲರೂ ಓದಬೇಕಾದ ಪುಸ್ತಕ.

-ಅನುಪಮಾ ಪ್ರಸಾದ್, ಕಥೆಗಾರ್ತಿ, ಕಾಸರಗೂಡು