ಮೂಗು ಸಣ್ಣದು ಮೂಗುತಿ ದೊಡ್ಡದು
ರಚನೆ: ಪುರಂದರ ದಾಸರು
ಪ್ರಸ್ತಾವನೆ: ಪುರಂದರದಾಸರಿಂದ ಬರೆದ ಈ ಕಾವ್ಯದ ರಚನಾಸನ್ನಿವೇಶ
ನನ್ನ ಮನದಲ್ಲಿ ಕೊಂಚ ಪ್ರಶ್ನಾತೀತ ಗೊಂದಲವೆಬ್ಬಿಸಿರುವುದು. ಬಲ್ಲವರು ಯಾರಾದರೂ ವಿವರಣೆ ನೀಡುವರೇ?
ಮೂಗು ಸಣ್ಣದು ಮೂಗುತಿ ದೊಡ್ಡದು
ಭಾರ ಯಾರು ಹೊರಬೇಕು ?
ಇಂಥಾ ಆಡಿದ ಮಾತುಗಳಾಡಿದವಳ
ಮೋರೆ ಹೇಗೆ ನೋಡಬೇಕು ?
ಮೀರಿ ಹೋದ ಮಾತಿಗೆ
ಎಳ್ಳು ನೀರೇ ಬಿಡಬೇಕು
ಕೂಡಿದ್ದ ಗೆಳೆಯರು ಆಡಿ
ಕೊಂಡ ಮೇಲೆ ಕೇರಿಯೇ ಬಿಡಬೇಕು
ವಾರಿಗೆ ಒಗೆತನ ಮೀರಿಹೋದವಳ
ಕೈ ಯಾರು ಪಿಡಿಯಬೇಕು ?
ಸ್ವಾಮಿ ಶ್ರೀಪುರಂದರವಿಠಲ
ರಾಯ ನೀನೆ ಪಿಡಿಯಬೇಕು