ಮೂಗ್ಗು ಹುಟ್ಟುವ ಸಮಯ...

ಮೂಗ್ಗು ಹುಟ್ಟುವ ಸಮಯ...

ಕವನ

  ನವ ವಸಂತದ ಸುಮಧುರ ಸರಸಕೆ

ನಲಿದಾಡಿ, ವಧುವಾಗಿ, ನವೀರಾಗಿ, ಮೈತುಂಬಿ

ಹೊರ ಚಾಚಿತು ಲತೆಯು ಧನ್ಯಭಾವ

ಮೂಗ್ಗಿಗೆ ಆಸರೆಯಾಗಿ..

ಮೈದಳೆದು ಮಗುವಾಗಿ

ರವಿಯ 'ಭಾ' ರತಿಯ ಸೆಲೆಗೆ

ಮೈಯೂಡ್ದಿ ಘಮಘಮಿಸಿತು

ಮೂಗ್ಗು ಕುಸುಮವಾಗಿ, ಬಾಳ ಭಾಷ್ಯದ ಸುಧೆಯಾಗಿ!

ಸ್ವಚ್ಚಾಂಗದಿ, ನರ್ತಿಸಿ, ವಿಹರಿಸಿ

ಸೌಗಂಧವ ಸೂಸಿ ಮಾರ್ದನಿಸಿ ಸೆಳೆದು ಒಂದಾಗಿ

ಜೆಂಕರಿಸಿತು ಹೂವು ಸಂತ್ರಪ್ತವಾಗಿ

'ವಂಶವ್ರಕ್ಶದ' ಚಿಲುಮೆಯಾಗಿ...

 

Comments