ಮೂಡಣದ ಉದಯ

ಮೂಡಣದ ಉದಯ

ಕವನ

ಉದಯ ಉದಯಿಸಿ ಬರುತ್ತಿರುವನು ಮೂಡಣದಿಂದ

ಕೆಂಪಾದ ಬಂಗಾರದ ತಟ್ಟೆ ಆಕಾರ ಚಂದದಿಂದ

ನವ ಚೇತನದ ಉತ್ಸುಕನಾಗಿ ಬರುತಿಹನು

ವಿಶ್ವದ ಮನುಜರಿಗೆ ಬೆಳಕ ನೀಡಲು ಬರುವನು.

 

ಸಕಲ ಜೀವರಾಶಿಗೆ ಬೆಳಕಾಗಿ ಬೆಳಗುವನು

 ಬಾನಲ್ಲೆ ಇದ್ದರು ಭೂಮಿಗೆಲ್ಲ ಹೊಂಬೆಳಕ ನೀಡುವನು

ಜೀವ ಜೀವಗಳಿ ಮರುಜೀವ ಮರುದಿನವು ನೀಡುವನು

ಅವನಿಂದಲೇ ವಿಶ್ವವೆಲ್ಲ ನಡೆದಾಡುವುದು ದಿನದಿನವು.

 

ಬಾನೆಲ್ಲ ಸಿಂಗಾರದಿಂದ ಕಂಗೊಳಿಸುವುದು

ಹೊಸ ಹೊಸ ಜೀವ ಜೀವಿಗಳೆಗೆ ಹರುಷ ತುಂಬುವುದು

ಹೊಸ ಹೊಸ ಆಶಾ ಕಿರಣವಾಗಿ ಪ್ರಜ್ವಲಿಸುವುದು

ಮೂಡಣದ ಉದಯ ಉದಯಿಸಿ ಪಡುವಣದಲ್ಲಿ ಮೂಳುಗುವ ತನಕ.

                                                                  - ಹೆಚ್.ವಿರುಪಾಕ್ಷಪ್ಪ ತಾವರಗೊಂದಿ.

 

Comments