ಮೂಡುಬಿದ್ರೆಯ ಡಾ. ಸೋನ್ಸ್ ಫಾರ್ಮ್

ಮೂಡುಬಿದ್ರೆಯ ಡಾ. ಸೋನ್ಸ್ ಫಾರ್ಮ್

ಮೂಡುಬಿದ್ರೆಯ ಬಳಿ ಇರುವ ಡಾ. ಸೋನ್ಸ್ ರವರ ಫಾರ್ಮ್ ಜಗತ್ಪ್ರಸಿದ್ಧ. ದೇಶ ವಿದೇಶಗಳಿಂದ ರೈತರು, ವಿದ್ಯಾರ್ಥಿಗಳು ಹಾಗು ಯಾತ್ರಿಗಳು ಇಲ್ಲಿಗೆ ಭೇಟಿ ಕೊಡುತ್ತಿರುತ್ತಾರೆ. ಸುಮಾರು ಮೂವತ್ತು ವರ್ಷಗಳಿಂದ ಇಲ್ಲಿ ನಡೆಯುತ್ತಿರುವ ಪ್ರಯೋಗಗಳ ಕುರಿತು ಡಾ. ಸೋನ್ಸ್ ರವರೊಂದಿಗಿನ ಸಂಪದ ಮಾತುಕತೆ ಇಲ್ಲಿದೆ. ವೀಕ್ಷಿಸಿ.

Comments

Submitted by venkatesh Mon, 11/11/2019 - 10:11

ಜಗತ್ಪ್ರಸಿದ್ಧ ಡಾ.ಸೋನ್ಸ್ ಫಾರ್ಮ್ :

ಡಾ. ಸೋನ್ಸ್ ನಮ್ಮ ಜನರಿಗೆ ಇನ್ನೂ ಹೆಚ್ಚು ಪರಿಚಿತರಾಗಬೇಕಿದೆ.

ಇದೊಂದು ಅತ್ಯಂತ ಪ್ರಭಾವಶಾಲಿ ಮತ್ತು ನಿಷ್ಠಾವಂತ ವಿಜ್ಞಾನಿಯ ಕಾರ್ಯತತ್ಪರತೆಯ, ಮತ್ತು ಅವರ ಸಿದ್ಧಿಪಡೆದ ಜೀವನದ ಅಗ್ಗೆ ನಡೆಸಿಸಿರುವ ಸಂದರ್ಶನ. ಇದನ್ನು ಇನ್ನೂ ಪರಿಣಾಮಕಾರಿಯಾಗಿ ಪ್ರಿತಿಬಿಂಬಿಸಬಹುದಿತ್ತು. ಇಂತಹ ವಿಜ್ಞಾನಿ ತಂತ್ರಜ್ಞರ ವಿಶಯಗಳನ್ನು ಒಂದು ಪ್ರಭಾವಿ ಪತ್ರಿಕೆಯಲ್ಲಿ ಪ್ರಕಟಿಸುವ ಅಗತ್ಯವಿದೆಯೆನ್ನುವುದಕ್ಕೆ ಎರಡು ಮಾತಿಲ್ಲ. ಸಂದರ್ಶನದ ದಲ್ಲೂ ವೀಡಿಯೋ ಗುಣಮಟ್ಟ ಸಾಧಾರಣ ಮತ್ತು ಅದರಲ್ಲಿ ಕೆಲವು ತೃಟಿಗಳಿವೆ ಎಂದು ಮಾತ್ರ ಹೇಳಬಲ್ಲೆ ನಾನೇ ಒಬ್ಬ ಫೋಟೋಗ್ರಾಫರ್ ಆದರೂ, ನನಗೆ ಒಳ್ಳೆಯ ವೀಡಿಯೋ ಮಾಡುವ ಪರಿಣತಿ ಇನ್ನೂ  ಬಂದಿಲ್ಲ. ಏಕೆಂದರೆ, ಈಗ ತಾನೇ ಕ್ಯಾಮೆರಾ ಖರೀದಿಸಿದ್ದೇನೆ. ಬಹುಶಃ ಕೆಲವು ಕಾಲದಮೇಲೆ ನಾನೂ ತಮ್ಮ ಮುಂದೆ ಹೇಳಿದ ಕಲೆಯಲ್ಲಿ ಸಿದ್ಧಿಪಡೆಯುವ ಭರವಸೆಯಿದೆ. ನಾನು ಸುಮಾರು ೧೧ ವರ್ಷಗಳ ಹಿಂದೆ ಸಂಪದ.ನೆಟ್ ಗೆ ಪಾದಾರ್ಪಣೆಮಾಡಿದ್ದೆ. ನಂತರ ನನ್ನದೇ ಅದ ಕೆಲವು ಕಾರಣಗಳಿಂದ ಲೇಖನಗಳನ್ನು ಬರೆಯಲು ಸಾಧ್ಯವಾಗಲಿಲ್ಲ. ನನ್ನ  ೭ ಬ್ಲಾಗ್ ಗಳಿಗೆ ಮತ್ತು ಫೇಸ್ಬುಕ್ ಗೆ ಮಾಹಿತಿ ಒದಗಿಸಿ ಪ್ರಕ್ರಿಯಿಸುವ ಹೊತ್ತಿಗೆ ನನ್ನ ತಲೆ ಪೂರ್ತಿಯಾಗಿ ಖಾಲಿಯಾಗಿರುತ್ತದೆ.

ಕೆಲವು ನನ್ನ ಅನಿಸಿಕೆಗಳನ್ನು ತಿಳಿಸಲು  ಇಚ್ಚಿಸುತ್ತೇನೆ : (ಇದು ನನ್ನ ವೈಯಕ್ತಿಯ ಅನ್ನಿಸಿಕೆ)

೧. ಸಂದರ್ಶನದಲ್ಲಿ ಸಂದರ್ಶನಕಾರ ಮತ್ತು ಸಂದರ್ಶಿಸುವವರು ಇಬ್ಬರೂ ಕಾಣಿಸಬೇಕು
೨. ಅಷ್ಟೊಂದು ಹತ್ತಿರದಿಂದ ವ್ಯಕ್ತಿಯ ಮುಖ ತೋರಿಸುವ ಅಗತ್ಯತೆ ತಿಳಿಯಲಿಲ್ಲ.
೩. ವಿಡಿಯೋ ಎಡಿಟ್ ಮಾಡಿ ಜೊತೆ ಜೊತೆಗೆ ಮಾತುಕತೆಯಲ್ಲಿ ಬರುವ ವಿಚಾರಗಳನ್ನು ತೋರಿಸಬೇಕು. (ಉದಾ: ಗಿಡಗಳ ವೈವಿಧ್ಯತೆ, ಮತ್ತು ಜಾತಿ ಪ್ರಜಾತಿಗಳನ್ನು ನೋಡಬೇಕಲ್ಲವೇ ?)
೪. ಆಡಿಯೋ ಗುಣಮಟ್ಟ ಕಾಯ್ದುಕೊಳ್ಳಬೇಕು.
೫. ಸಬ್ ಟೈಟಲ್ ಚಿಕ್ಕದಾಗಿರಲಿ. ಅವು ಇಂಗ್ಲಿಷ್ ನಲ್ಲಿದ್ದರೆ ಹೆಚ್ಚುಜನರನ್ನು ತಲುಪುತ್ತದೆ. (ಎಷ್ಟೋ ಜನರಿಗೆ ಕನ್ನಡ ಓದಲು ಬರದು.  ಕೆಲವರು ಮಾತಾಡುತ್ತಾರೆ)

-ನಮಸ್ಕಾರ
ವೆಂಕಟೇಶ್,