ಮೂಡುವ ನಮ್ಮ ಸೂರ್ಯ

ಮೂಡುವ ನಮ್ಮ ಸೂರ್ಯ

ಕವನ

ಏಳು ಕುದುರೆಯ ಬೆಳ್ಳಿ ರಥವ

ಏರಿ ಬರುವ ನಮ್ಮ ಸೂರ್ಯ

ಬಾನ ದೊರೆಯು ಬೆಳಕಿನೊಡೆಯ

ಮೂಡಿ ಬರುವ ನಮ್ಮ ಸೂರ್ಯ

 

ಭುವಿಗು ಬಾನಿಗು ಬೆಳಕ ಚೆಲ್ಲುತ

ಶಶಿಗು ತಾರೆಗು ಶಾಂತಿ ನೀಡುತ 

ಕೆಂಪು ಮೊಗದಲಿ ನಗೆಯ ಚೆಲ್ಲುತ

ಮೂಡಿ ಬರುವ ನಮ್ಮ ಸೂರ್ಯ

 

ಜಗದ ಕಪ್ಪುಬಣ್ಣಕೆ ವರ್ಣ ನೀಡುತ

ಕಣಕಣಕು ಖುಷಿಗೆ ಬಣ್ಣ ಬಳಿಯುತ

ಜಗಕೆ ವಿಸ್ಮಯ ಜನಕೆ ತನ್ಮಯ ತರುತ

ಮೂಡಿ ಬರುವ ನಮ್ಮ ಸೂರ್ಯ

 

ಮಂಜು ಬೀಳಿಸಿ ಇಬ್ಬನಿ ಮೂಡಿಸಿ

ಚಿಗುರ ಚಿಗುರಿಸಿ ಹಸಿರ ಪಸರಿಸಿ 

ನಾದ ಮೂಡಿಸಿ ಹಕ್ಕಿ ಹಾಡಿಸಿ

ಮೂಡಿ ಬರುವ ನಮ್ಮ ಸೂರ್ಯ

 

ಮೇಘ ಚಿತ್ತಾರ  ಬಿಸಿಯ ನೇತಾರ

ವಾಯು ವಿಹಾರಿ ವರುಣ ಮಂಜರಿ

ಕತ್ತಲೆ ದೂಡುತ ಬೆಳಕ ಹರಿಸುತ

ಮೂಡಿ ಬರುವ ನಮ್ಮ ಸೂರ್ಯ

 

-ಬಂದ್ರಳ್ಳಿ ಚಂದ್ರು

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್