ಮೂಢ ಉವಾಚ - 11

ಮೂಢ ಉವಾಚ - 11

ಬರಹ

       ಮೂಢ ಉವಾಚ -11 


ಅವರಿಲ್ಲ ಇವರಿಲ್ಲ ನಿನ್ನವರು ಯಾರಿಲ್ಲ|


ಹಿತವಿಲ್ಲದ ಕಹಿ ಪ್ರವರ ಜಗಕೆ ಬೇಕಿಲ್ಲ||


ಬಿದ್ದೆದ್ದು ನಡೆಯದಿರೆ ಒಗೆಯುವರು ಕಲ್ಲ|


ಹೆದರಿಕೆ ಸಲ್ಲ ದೇವನಿಹನಲ್ಲ ಮೂಢ||


 


ಸರಸರನೆ ಮೇಲೇರಿ ಗಿರಕಿ ತಿರುಗಿ|


ಪರಪರನೆ ಹರಿದು ದಿಕ್ಕೆಟ್ಟು ತಲೆಸುತ್ತಿ||


ಬೀಳುವುದು ಗಾಳಿಪಟ ಬಂಧ ತಪ್ಪಿದರೆ|


ಸೂತ್ರ ಹರಿದರೆ ಎಚ್ಚರವಿರು ಮೂಢ||


*********************


-ಕವಿನಾಗರಾಜ್.