ಮೂಢ ಉವಾಚ - 163

ಮೂಢ ಉವಾಚ - 163

ಕವನ

ಬೈಬಲ್ಲು ಹೇಳುವುದು ಜಗ ಜೀವ ದೇವ ಕುರಾನು ಸಾರುವುದು ಜಗ ಜೀವ ದೇವ |

ಸಕಲ ಮತಗಳ ಸಾರ ಜಗ ಜೀವ ದೇವ ಒಂದಲದೆ ಹಲವುಂಟೆ ಕಾಣೆ ಮೂಢ || ..325

ನಾನಾರೆಂದು ತಿಳಿಸಿ ಹೇಳುವನೆ ಗುರುವು ಅವನೆಂತೆಂದು ತೋರಿ ತಿದ್ದುವನೆ ಗುರುವು |

ಜಗವನನುಭವಿಸೆ ಮಾರ್ಗದರ್ಶಿಯೆ ಗುರುವು ಗುರಿಯವನು ಗುರುವವನು ಒಬ್ಬನೇ ಮೂಢ || ..326

************************ -ಕ.ವೆಂ.ನಾಗರಾಜ್.

Comments