ಮೂಢ ಉವಾಚ - 9
ಬರಹ
ಮೂಢ ಉವಾಚ - 9
ರಸಭರಿತ ಫಲಮೂಲ ಕೊಂಬೆ ತಾನಲ್ಲ|
ಫಲಸತ್ವ ಸಾಗಿಪ ಮಾರ್ಗ ತಾನಹುದು||
ಮಾಡಿದೆನೆನಬೇಡ ನಿನ್ನದೆನಬೇಡ|
ಜಗವೃಕ್ಷ ರಸ ಹರಿದ ಕೊಂಬೆ ನೀನು ಮೂಢ||
ಸ್ವಾಭಿಮಾನಿಯ ಜಗವು ಗುರುತಿಪುದು|
ಹಸಿವಾದರೂ ಹುಲಿ ಹುಲ್ಲು ತಿನ್ನದು||
ಕೊಂಡಾಡಿದರೂ ಶಿರ ಚೆಂಡಾಡಿದರೂ|
ತನ್ನತನವ ಉಳಿಸಿಕೊಳ್ಳೆಲೋ ಮೂಢ||
*********************
-ಕವಿನಾಗರಾಜ್.