ಮೂರನೆಯ ಇರುವು

ಮೂರನೆಯ ಇರುವು

ಪುಸ್ತಕದ ಲೇಖಕ/ಕವಿಯ ಹೆಸರು
ಅರವಿಂದ ಚೊಕ್ಕಾಡಿ
ಪ್ರಕಾಶಕರು
ಯಾಜಿ ಪ್ರಕಾಶನ, ಹೊಸಪೇಟೆ, ವಿಜಯನಗರ
ಪುಸ್ತಕದ ಬೆಲೆ
ರೂ. ೧೨೦.೦೦

ಅರವಿಂದ ಚೊಕ್ಕಾಡಿಯವರು ಬರೆದ ಸುಂದರ ಕೃತಿ 'ಮೂರನೆಯ ಇರುವು'. ಪುಸ್ತಕದ ಬೆನ್ನುಡಿಯಲ್ಲಿ ಯು ಆರ್ ಅನಂತಮೂರ್ತಿ ಇವರು ಹೀಗೆ ಬರೆದಿದ್ದಾರೆ " ಕನ್ನಡ ಭಾಷೆಯಲ್ಲಿ ಯಾವುದಾದರೂ ಒಂದು ವಿಷಯವನ್ನು ಕುರಿತು ದೀರ್ಘವಾಗಿ ಸಮಗ್ರವಾಗಿ ಯೋಚಿಸಿ ಬರೆದಿರುವವರ ಸಂಖ್ಯೆ ತೀರಾ ವಿರಳ. ಅರವಿಂದ ಚೊಕ್ಕಾಡಿ ಅವರ ಈ ಪುಸ್ತಕ ವಿನಾಯಿತಿ. ಬ್ರಿಟಿಷ್ ವಿಮರ್ಶಕನೊಬ್ಬ ಶೋಧನಾತ್ಮಕವಾದ ಬರಹಗಾರರಿಗೆ ಒಂದು ಸೂಚನೆ ಕೊಡುತ್ತಾನೆ "Only Connect” ಅಂದರೆ ಸಂಬಂಧವಿರದಂತೆ ಕಾಣುವ ವಿಷಯಗಳಲ್ಲಿ ಸಂಬಂಧಗಳನ್ನು ಕಂಡಾಗ ನಿಜವಾದ ಚಿಂತನೆ ಪ್ರಾರಂಭವಾಗುತ್ತದೆ. ಉತ್ಪಾದನಾ ವಿಧಾನಕ್ಕೂ ಉತ್ಪಾದನಾ ಸಂಬಂಧಗಳಿಗೂ ನಡುವೆ ಕೊಂಡಿಯನ್ನು ಕಾಣುವವನು ನಮಗೆ ಪರಿಚಯವಿರುವ ಮಾರ್ಕಿಸ್ಟರಿಗಿಂತ ಮುಂದೆ ಹೋಗುತ್ತಾನೆ. ನಮ್ಮ ಕ್ರಾಂತಿಕಾರರು ಉತ್ಪಾದನಾ ಸಂಬಂಧಗಳನ್ನು ಬದಲಾಯಿಸಿದರೆ ಮಾತ್ರ ಹೊಸ ಯುಗ ಪ್ರಾರಂಭವಾಗುತ್ತದೆಂದು ತಿಳಿಯುತ್ತಾರೆ. ಆದರೆ ಮಹಾತ್ಮ ಗಾಂಧಿಯವರು ಉತ್ಪಾದನಾ ವಿಧಾನದಲ್ಲೂ ಬದಲಾವಣೆಗಳನ್ನು ಬಯಸುತ್ತಾರೆ. ಈ ಮೂಲಕ ಒಂದು ಹೊಸ ಸಂಸ್ಕೃತಿಯೂ, ಮನುಷ್ಯನ ಒಳಬಾಳಿನ ನೆಮ್ಮದಿಯೂ ಒಟ್ಟೊಟ್ಟಿಗೇ ಸಾಧಿತವಾಗುತ್ತದೆ. ಅರವಿಂದ ಚೊಕ್ಕಾಡಿಯವರು ತಮ್ಮ ಸುತ್ತಲಿನ ಎಲ್ಲ ವಿಚಾರಗಳನ್ನು ಪರೀಕ್ಷಿಸಿ, ತಮ್ಮದೇ ಆದ ಒಂದು ಯೋಚನಾ ಕ್ರಮವನ್ನು ಈ ಪುಸ್ತಕದಲ್ಲಿ ನಮ್ಮೆದುರು ಇಟ್ಟಿದ್ದಾರೆ. ನಾನು ಕಾಣುತ್ತಿದ್ದಂತೆಯೇ ಬೆಳೆಯುತ್ತಾ ಹೋದ ಅರವಿಂದ ಚೊಕ್ಕಾಡಿಯವರನ್ನು ಗೌರವಿಸಿ ಪ್ರೀತಿಯಿಂದ ಈ ಮಾತುಗಳನ್ನು ಆಡಿದ್ದೇನೆ."