ಮೂರು ಅತಿ ಪುಟ್ಟ ಕಥೆಗಳು

ಮೂರು ಅತಿ ಪುಟ್ಟ ಕಥೆಗಳು

ವಿಪರ್ಯಾಸ

ಚುನಾವಣೆಗಳ ಸಮಯ ಶವವೊಂದರ ಕೆಳಗೆ ಕರೆನ್ಸಿ ನೋಟುಗಳ ಬಂಡಲ್‌ಗಳೊಂದಿಗೆ ಆಂಬ್ಯುಲೆನ್ಸ್ ರಾಜ್ಯದ ಗಡಿಯನ್ನು ದಾಟುತ್ತಿದೆ.,.

ಅದರಲ್ಲಿನ ಒಂದೇ ಕಟ್ಟು ಇದ್ದರೂ.. ಶವವಾಗಿದ್ದ ಆ ಬಡ ರೋಗಿಯು ಬದುಕಬಹುದಿತ್ತು. ಇದು ವಿಪರ್ಯಾಸವೋ? ಆ ಬಡವನ ದೌರ್ಭಾಗ್ಯವೋ?

***

ಹ(ಹೆ)ಣದಾಟ

ಅವನು.. ಜೀವನ ಪೂರ್ತಿ ಹಣ ಸಂಗ್ರಹಿಸುವುದರಲ್ಲೇ ತೊಡಗಿದ್ದ.. ಇತ್ತ ಕಾಲನು ಅವನ ಆಯುಷ್ಯವ ಕಳೆಯುತ್ತಿದ್ದ.. ಒಂದು ದಿನ ಹೆಣವಾಗಿ ಹೋದ. ಹಣ ಅವನ ಹೆಣದ ಮೇಲೆ ಕ್ಯಾಕರಿಸಿ ಉಗಿದು ಕೇಕೆ ಹಾಕಿ ನಗುತ್ತಾ ಮತ್ತೊಬ್ಬನ ಕೈ ಕುಲುಕಲು ಹೊರಟಿತು.

***

ನ(ಹಿನ್ನ)ಡೆ 

ನನ್ನಿಂದಲೇ ಎಲ್ಲಾ ನಾನಿಲ್ಲದೆ ಏನು ನಡೆಯುವುದಿಲ್ಲ ಎಂದು ಅವನು ಬೀಗುತ್ತಿದ್ದ. ಒಂದು ದಿನ ಅವನು ಮೌನವಾಗಿ ಮಲಗಿಬಿಟ್ಟ. ಆ ದಿನ ಎಲ್ಲವೂ ನಡೆಯಿತು, ಅವನು ಮಾತ್ರ ನಡೆಯಲಿಲ್ಲ.

~ಸಂಪಿಗೆ ವಾಸು, ಬಳ್ಳಾರಿ

ಚಿತ್ರ ಕೃಪೆ: ಇಂಟರ್ನೆಟ್ ತಾಣ