ಮೂರು ಹನಿಗಳು...!
ಕವನ
೧. ಸಲಹೆ
ಉದರದೊಳಗಿನ ಭ್ರೂಣ
ಧ್ಯಾನಸ್ಥ
ಮುನಿ...!
ಅನುಭವ ಕೊಟ್ಟು ಪಡೆದು
ಜ್ಞಾನಿಯಾಗು ನೀ!
೨ ಬೀಜದ ಸ್ವಗತ
ಹನಿಯೊಳಗಿತ್ತೇ
ಬೆಳಕ ಸುಳಿ...
ಕಳಚಿ ಬಿಟ್ಟಿತ್ತಲ್ಲಾ
ಕತ್ತಲ ಸರಪಳಿ!
೩ ಅಧ್ಯಯನ
ಎರೆಹುಳದ
ಒದ್ದಾಟ ರೈತನ
ಹೃದಯ ಹಿಂಡಿತು!
ದಪ್ಪ ಪುಸ್ತಕದೊಳಗೆ
ಬೆಳೆಯಿತು!
-’ಪದ್ಮ’ ಬೆಂಗಳೂರು
ಚಿತ್ರ ಕೃಪೆ: ಅಂತರ್ಜಾಲ ತಾಣ
ಚಿತ್ರ್