ಮೂರು ಹನಿಗಳು
ಕವನ
1)
ಕನಸಿನಲ್ಲಿ ಕಾಡುವ ನೆನಪುಗಳ
ಬೆಳಗು ಮುಂಜಾನೆ ನೆನೆಯಬೇಡಾ
ಮಾಡಬೇಕಾದ ಕಾಯಕವ ನೆನೆದು
ಮುಂದಡಿ ಇಟ್ಟು ನೋಡು,
ಮುದಗೊಳಿಸುವ ಕರ್ಮತೃಪ್ತಿಯು
ಕಾಣದ ಸ್ವರ್ಗಕ್ಕಿಂತ ಮಿಗಿಲು ನೋಡಾ.
2)
ಜಗಳವಾಡುವ ಬದಲಿಗೆ
ಮುಗುಳುನಗೆಯ ಬೀರಿ ನೋಡಿ
ಜಗತ್ತು ಎಷ್ಟು ಚೆಂದವಾಗಿರುತ್ತದೆ,
ನಮ್ಮ ಮೊಗವೂ ಅಂದವಾಗಿರುತ್ತದೆ.
3)
ಕಣ್ಣಿನೊಳಗೊಂದು ಕಣ್ಣು
ಅದು ಅಂತರಂಗದ ಕಣ್ಣು
ಕಣ್ಣನ್ನು ಮುಚ್ಚಿ ಮಲಗಿದಾಗಲೂ
ಅಂತರಂಗದ ಕಣ್ಣಿಗೆ ನಿದ್ದೆ ಇಲ್ಲ
ಕಣ್ಣಿಗೆ ಕಾಣದ ವಿಷಯಗಳು
ಅಂತರಂಗದ ಕಣ್ಣಿಗೆ ಗೋಚರ
ಕಣ್ಣು ಗೋಚರ
ಅಂತರಂಗದ ಕಣ್ಣು ಅಗೋಚರ