ಮೂರ್ ಖ
ಬರಹ
ಮೂರ್ಖಂಗೆ ಬುದ್ಧಿಯನು ನೂರ್ಕಾಲ ಪೇಳಿದರೆ
ಗೋರ್ಕಲ್ಲಮೇಲೆ ಮಳೆಗರೆದರಾ ಕಲ್ಲು
ನೀರ್ಕೊಳ್ಳಲಹುದೆ ಸರ್ವಜ್ಞ
*೦*
ಮೂರ್ಖಾ ನ ದ್ರಷ್ಟವ್ಯಾ ದ್ರಷ್ಟವ್ಯಾಶ್ಚೇ-
ನ್ನತೈಸ್ತು ಸಹ ತಿಷ್ಠೇತ್
ಯದಿ ತಿಷ್ಠೇನ್ನ ಕಥಯೇದ್ಯದಿ ಕಥಯೇ-
ನ್ಮೂರ್ಖವತ್ಕಥಯೇತ್
(ಸುಭಾಷಿತಸುಧಾನಿಧಿ)
ಮೂರ್ಖರನ್ನು ಕಾಣಲು ಹೋಗಬಾರದು; ಕಂಡರೂ ಅವರೊಡನೆ ಇರಬಾರದು; ಹಾಗೊಮ್ಮೆ ಇದ್ದರೂ ಅವರೊಡನೆ ಮಾತಾಡಬಾರದು; ಹಾಗೇನಾದರೂ ಮಾತಾಡಿದರೆ ಮೂರ್ಖನಂತೆಯೇ ಮಾತಾಡಬೇಕು.
-೦-
ಮೂರ್ಖರಿಗೆ ಹೇಳುವವ ಶತಮೂರ್ಖ ತಾನು
ಬುದ್ಧಿವಂತರಿಗೆ ತಾ ಹೇಳಬೇಕೇನು?
ಖಗದ ಉಡ್ಡಾಣ ಬಲ
ಖದ್ಯೋತನಾ ಬೆಳಕು
ಖನಿಜಸಂಪದ ಮೌಲ್ಯ
ಖರೆ ಎಂದಿಗೂನೂ
(ಎಚ್. ಆನಂದರಾಮ ಶಾಸ್ತ್ರೀ)