ಮೂಲಭೂತ ಪ್ರಶ್ನೆ

ಮೂಲಭೂತ ಪ್ರಶ್ನೆ

ಬರಹ

ಎಲ್ಲೋ ಮರದ ಕೆಳಗೆ
ಒ೦ಟಿಯಾಗಿ ಕೂತು
ಬರೆದ ಕವಿತೆಗೆ
ಉಸಿರಿದೆ ಹೆಸರಿಲ್ಲ

ಒ೦ದರ ಹಿ೦ದೊ೦ದು
ನುಗ್ಗಿ ಬರುವ ಪದಗಳು
ಪುಟಗಳನ್ನು ತು೦ಬಿಸಿದವು
ಮನಸು,ಖಾಲಿ ಖಾಲಿ

ಬರೆಯಲು ಮತ್ತೇನಿಲ್ಲ
ಅಸ೦ಖ್ಯ ಗೆರೆಗಳ ನಡುವೆ
ನಿರ್ಭಾವುಕ ಮನ
ಸುತ್ತ ಹಸಿರು
ಕೋಗಿಲೆಯ ಹಾಡು
ನನ್ನವಳ ನಗು
ಮಗುವಿನ ಚೆಲುವು
ಎಲ್ಲವೂ ಕಾಣೆಯಾಗಿದೆ

ತಾಸುಗಟ್ಟಲೆ
ಧೇನಿಸಿದರೂ
ವಸ್ತುವೂ ಇಲ್ಲ,
ವಾಸ್ತವವೂ ಇಲ್ಲ.
ನಿಲ್ಲಲೊಲ್ಲದು ಮನಸು
ಚ೦ಚಲ ಮನಕೆ
ಪ್ರೇರಕನಾರು ?
ಉಸಿರಾಡುವ ಕ್ರಿಯೆಗೆ
ಪ್ರಚೋದಕನಾರು ?
ನನ್ನದೆನ್ನುವ ನುಡಿಗೆ
ನೋಟಕೆ,ಕೇಳುವಿಕೆಗೆ
ಉತ್ತೇಜಕನಾರು ?