ಮೂಲಭೂತ ಶಿಕ್ಷಣ ದಿಂದ ಹಳ್ಳಿಗಳಲ್ಲಿನ ವ್ಯವಸ್ಥೆ ಸುಧಾರಿಲಾದೀತೇ ?

ಮೂಲಭೂತ ಶಿಕ್ಷಣ ದಿಂದ ಹಳ್ಳಿಗಳಲ್ಲಿನ ವ್ಯವಸ್ಥೆ ಸುಧಾರಿಲಾದೀತೇ ?

Comments

ಬರಹ

ಮೊದಲು, ತುಂಬಾನೇ ಮೊದಲು, ಹಳ್ಳಿಗಳಲ್ಲಿ ಈಗಿನ ಹಾಗೆ ಇರಲಿಲ್ಲವಂತೆ, ಎಲ್ಲರ ವಾತಾವರಣ ಕಲುಶಿತವಾಗಿರಲಿಲ್ಲವಂತೆ,
ಅದಕ್ಕೇ ಆರೋಗ್ಯವೂ ಸರಿಯಾಗಿರುತ್ತಿತ್ತು. ಒಂದು ಕಡೆಯಿಂದ ಇನ್ನೊಂದೆಡೆ ಹೋಗಲು ಈಗಿನ ಹಾಗೆ ಜಾಸ್ತಿ,
ಬೇಕೆನ್ನುವಷ್ಟು ವಾಹನಾನುಕೂಲಗಳಿರಲಿಲ್ಲ,ಸಂಪರ್ಕಸಾಧನಗಳಿರಲಿಲ್ಲ. ಸಾಧನಗಳಿರಲಿಲ್ಲ.
ಆದರೆ ಮನುಷ್ಯ ಮನುಷ್ಯರೊಳಗೆ ಒಂದು ನಿಕಟ ಸಂಭಂಧವಿತ್ತು, ಅದನ್ನು ಬೆಳೆಸಿಕೊಳ್ಳುವ ಪರಿಪಾಟವಿತ್ತು.
ಆದರೆ ಈಗ...
ಮನುಷ್ಯ ಸಂಭಂಧಗಳು ಅವುಗಳ ನಿಕಟತೆ ಜಟಿಲವಾದಂತೆ, ವಾತಾವರಣದಲ್ಲಿ ಕಲುಷಿತತೆ, ಯಾಂತ್ರೀಕರಣದೊಂದಿಗೆ
ಕ್ಷೀಣವಾಗುತ್ತಿದೆ. ಆದರೆ ಪ್ರಾಯಶಃ ಪಟ್ಟಣಗಳಲ್ಲಿನ ವಿದ್ಯೆಯ ವೈಭವೀಕರಣ, ರೋಗಗಳೊಂದಿಗೆ ವೈದ್ಯರು ಬೆಳೆದ ಹಾಗೆ ಮನುಷ್ಯನ ಸರಾಸರಿ ಆಯುಷ್ಯವೂ
ವ್ರಧ್ಧಿಯಾಗತೊಡಗಿದೆ. ಇದಕ್ಕೆ ಆರೋಗ್ಯದ ಬಗೆಗಿನ ಕಾಳಜಿಯೊಂದೆಡೆಯಾದರೆ,
ಇನ್ನೊಂದೆಡೆ ಪಟ್ಟಣಗಳಲ್ಲಿನ ಶ್ರೀಮಂತ ಜೀವನ ಶೈಲಿಯೂ ಬದಲಾಗಿರೋದಕ್ಕೆ ಮುಖ್ಯ ಕಾರಣ ಶಿಕ್ಷಣವೇನಾ?.

ಇದಕ್ಕೆಲ್ಲಾ ಕಾರಣ ಶಿಕ್ಷಣವೆಂದಾದರೆ..
ಹಳ್ಳಿಗಳಲ್ಲಿನ ಪರಿಸ್ಥಿತಿ, ಶಿಕ್ಷಣ/ವಿದ್ಯೆಯಿಂದಾಗಿ ಬದಲಾಗಬಹುದೇ?
ಮನುಷ್ಯನ ಮೂಲಭೂತ ಹಕ್ಕುಗಳಲ್ಲೊಂದಾದ ಶಿಕ್ಷಣ (ವಿದ್ಯೆ) ವ್ಯವಸ್ಥೆಗಳಲ್ಲಿನ ಕುಂದು ಕೊರತೆಯನ್ನು ನೀಗಿಸುವದರಿಂದ ಅಲ್ಲಿನ ಜೀವನ  ಸ್ಥರವನ್ನು ಬದಲಿಸಬಹುದೇ?
ಅಥವಾ ಇನ್ನೇನು ಮಾಡಬೇಕಾದೀತು...? ಹಳ್ಳಿಗಳಲ್ಲಿನ ಈಗಿನ ಪರಿಸ್ಥಿತಿ ಸುಧಾರಿಸಲು..?
ಸ್ನೇಹಿತರೇ ಇದೇ ಇವತ್ತಿನ ಚರ್ಚೆ...
ನಿಮ್ಮ ಸಲಹೆ ಬರಲಿ.... ನೇರವಾಗಿ..

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet