ಮೂಲ ಅಮೇರಿಕನ್ನರು ಭಾರತೀಯರೆ?
ನನಗೆ ಚಿಕ್ಕ ವಯಸ್ಸಿನಿಂದಲೂ ಅಮೆಜ಼ಾನ್ ಎಂದರೆ ಅದೇನೊ ಆಕರ್ಷಣೆ. ಎಲ್ .ಡೂ ರಾಡೋ ಚಿನ್ನದ ಭೇಟೆಯ ಕಥೆಗಳು, ಅಲ್ಲಿನ ಭಯಂಕರ ಪ್ರಾಣಿಗಳು,ಸುಂದರವಾದ ಪ್ರಕೃತಿ. ಇವೆಲ್ಲ ನನಗೆ ಅದೆಷ್ಟು ಹುಚ್ಚು ಇಡಿಸಿತು ಎಂದರೆ ದೊಡ್ಡವನಾಗುತ್ತ ಅಮೆಜ಼ಾನ್ ಮೇಲಿನ ಪುಸ್ತಕಗಳು, ಚಿತ್ರಗಳು ಇವೇ ನನ್ನ ಮೆಚ್ಚಿನ ಅಂಶಗಳಾದವು. ಒಂದೇ ಮಾತಿನಲ್ಲಿ ಹೇಳಬೇಕೆಂದರೆ ಅಮೆಜ಼ಾನ್ ನನ್ನ ಕಾಣಿಸಿನ ಲೋಕ. ಇಷ್ಟು ಮುಂದುವರಿದಿದ್ದರು ಮಾನವನ ಕುಲಕ್ಕೆ ಸವಾಲೊಡ್ಡಿ ನಿಂತಿರುವ ಅಮೆಜ಼ಾನ್ ಗೆ ಒಂದು ಸಲಾಮ್. ಹೀಗೆ ಅಮೆಜ಼ಾನ್ ಬಗ್ಗೆ ಓದುತ್ತಾ ಅಲ್ಲಿನ ನಾಗರೀಕತೆಯ ಬಗ್ಗೆ ಓದಲು ಶುರು ಮಾಡಿದೆ.
ನನಗೆ ಅಚ್ಚರಿಯಾದದ್ದು ಮತ್ತು ಈ ಲೇಖನಕ್ಕೆ ಕಾರಣವಾದದ್ದು ಅಲ್ಲಿನ ಜನರನ್ನು ಇಂಡಿಯನ್ನರು ಎಂದು ಕರೆಯುವುದು. ಅದಕ್ಕೆ ಕಾರಣ ಹುಡುಕಲು ಹೊರಟ ನನಗೆ ಸಿಕ್ಕ ಉತ್ತರ ಕೊಲಂಬಸ್ ಭಾರತವನ್ನ ಕಂಡು ಹಿಡಿಯಲು ಶತ ಪ್ರಯತ್ನ ಪಟ್ಟು ಅಮೇರಿಕ ದಡ ಸೇರಿದ ಅದನ್ನೆ ಇಂಡಿಯಾ ಎಂದು ತಿಳಿದ ಆತ ಅಲ್ಲಿನ ಜನರನ್ನು ಇಂಡಿಯನ್ನರು ಎಂದು ಕರೆದ. ಆದ್ದರಿಂದ ಅವರನ್ನು ಇಂದು ಕೂಡ ಇಂಡಿಯನ್ನರು ಎಂದೇ ಗುರುತಿಳಿಸಲ್ಪಡುತ್ತಾರೆ.
ನನಗೆ ಇಷ್ಟಕ್ಕೆ ಸಮಾಧಾನ ಸಿಗದೆ ಅಲ್ಲಿನ ಇಂಕಾ,ಮಾಯನ್ನರು ಮತ್ತು ಅಜತೆಕರ ನಾಗರೀಕತೆ ಓದಲು ಶುರುಮಾಡಿದೆ. ಅಲ್ಲಿ ನಾನು ಗಮನಿಸಿದ ಸೂಕ್ಷ್ಮ ವಿಷಯಗಳೆಂದರೆ ಅವರ ಸಂಪ್ರದಾಯಗಳು ಬಹುತೇಕ ನಮ್ಮಂತೆಯೆ ಇರುವುದು.
ಇದಕ್ಕೆ ಉತ್ತರ ಹುಡುಕಲು ಹೋರಾಟ ನನಗೆ ತುಂಬ ದಿನಗಳೇ ಹಿಡಿಯಿತು. ಅದೇನು ಉತ್ತರ,ಭಾರತೀಯರಿಗೂ ಅಮೆರಿಕನ್ನರಿಗೂ ಇರುವ ಸಂಭಂಡವಾದರೂ ಏನು? ಎಲ್ಲವನ್ನೂ ಸಂಕ್ಷಿಪ್ತವಾಗಿ ವಿವರಿಸುತ್ತೆನೆ.
ಅದು 1491ನೇ ಈಸವಿ, ಯುರೋಪ್ ಅದಾಗಲೇ ಮುಂದುವರಿಯುತ್ತಾ, ವ್ಯವಹಾರ ಬೆಳೆಸುತ್ತಾ, ಪ್ರಾಣಿ ಸಾಗಾಣಿಕೆ ಮಾಡುತ್ತಾ, ವ್ಯವಸಾಯದಿಂದ ಹಸಿವು ನೀಗಿಸುತ್ತಾ ಬೆಳೆಯ ತೊಡಗಿತ್ತು. ಅದೇ ಕಾಲಕ್ಕೆ ಚಿನ್ನದ ಭೇಟೆ ಹೀನೆದಿಗಿಂತಲು ಅಧಿಕವಾಗಿತ್ತು. ಅದಕ್ಕೆ ಅವರು ಭಾರತವನ್ನು ಹುಡುಕುವ ಪ್ರಯತ್ನಕ್ಕೆ ಕೈ ಹಾಕಿದರು. ಹುಡುಕಲು ಹೊರಟ ಅದೆಷ್ಟೋ ನವೀಕರಲ್ಲಿ ಕೊಲಂಬಸ್ ಕೂಡ ಒಬ್ಬ. ಆತ ಭಾರತ ಹುಡುಕಲು ಹೋಗಿ ಕೊನೆಗೆ ಸೇರಿದ್ದು ಮಾತ್ರ ಅಮೆರಿಕಾವನ್ನು. ಅದನ್ನೇ ಇಂಡಿಯಾ ಎಂದು ತಿಳಿದು ಇಂಡಿಯನ್ನರು ಎಂದು ಕರೆದ.
ಹೌದು ಭಾರತವನ್ನ ಏಕೆ ಇಂಡಿಯಾ ಎಂದು ಕರೆಯುತ್ತಾರೆ ಎಂದು ಗೊತ್ತೇ? ಇಲ್ಲವಾದರೆ ಅದು ಹೇಳುತ್ತೇನೆ ಇರಿ. ಸಿಂಧೂ ನಾಗರಿಕತೆ ಇಂದ ನಮ್ಮನ್ನ ಸಿಂಧು ಎಂದು ಕೂಗುತಿದ್ದರು, ನಂತರ ಪರ್ಷಿಯನ್ನರು ಅದನ್ನ ಹಿಂದೂ ಎಂದು ಕರೆದರು, ಮತ್ತೆ ಗ್ರೀಕರು ಇಂಡಸ್ ನಾಗರಿಕತೆ ಎಂದು ಕರೆದರು, ಕೊನೆಗೆ ರೋಮ್ ನವರು ಇಂಡಿಯಾ ಎಂದು ಹೆಸರಿಟ್ಟರು.
ಮತ್ತೆ ಕೊಲಂಬಸ್ ಬಗ್ಗೆ ಬರೋಣ, ಆತ ಅಮೆರಿಕಾವನ್ನ ಕಂಡು ಹಿಡಿದಾಗ ಅಲ್ಲಿ ಅದಾಗಲೇ 20ಮಿಲಿಯನ್ ನಾಗರಿಕಾರಿರುತ್ತಾರೆ, 300ಕ್ಕೂ ಅಧಿಕ ಭಾಷೆ ಇರುತ್ತದೆ. ಅದರಲ್ಲಿ ಪ್ರಮುಖವಾದವು Na-Dene, Eskimo-Alut, Algonqiuan, Athabascan, Siouan. ಆಗ ಅಮೇರಿಕದಲ್ಲಿ ನೂರಕ್ಕೂ ಅಧಿಕ ತರಕಾರಿಗಳ ವ್ಯವಸಾಯವಿರುತ್ತದೆ. ಅಮೇರಿಕದಲ್ಲಿ ಕುರಿ, ಮೇಕೆ, ಹಂದಿಗಳು ಇರುವುದಿಲ್ಲ ಬದಲಾಗಿ ಆ ವಾತಾವರಣಕ್ಕೆ ತಕ್ಕಂತೆ ಲಾಮ ಎಂಬ ಪ್ರಾಣಿ ಸಾಕುತಿರುತ್ತಾರೆ. ಬೇರೆಲ್ಲೂ ಸಿಗದ ಟ್ಯೂಬ(Tuba) ಎಂಬ ಸಸಿಗಳು ಪೆರು ದೇಶದಲ್ಲಿ ಮಾತ್ರ ವ್ಯವಸಾಯ ವಾಗುತಿರುತ್ತದೆ. ಇದೆಲ್ಲಕಿಂತಲೂ ಮುಕ್ಯವಾದ ವಿಷಯವೆಂದರೆ ಪ್ರಪಂಚಕ್ಕೆ ತಿಳಿಯದ ಜೋಳ ಅಲ್ಲಿನ ಮುಖ್ಯ ಬೆಳೆಯಾಗಿರುತ್ತದೆ. ತಿಳಿದಿರಲಿ ನಾವು ಇಂದು ದೇವರುಗಳಿಗೆ ಹೇಗೆ ಕೋಳಿಯನ್ನು ಬಲಿಯಾಗಿ ಕೊಡುತ್ತೇವೊ ಹಾಗೆ ಅಜತೆಕರು ಟರ್ಕಿಗಳನ್ನ ಬಳಿ ಕೊಡುತ್ತಿದ್ದರು. ಇದೆಲ್ಲಕಿಂತ ಮುಖ್ಯವಾದ ಅಂಶವೇನೆಂದರೆ ಜೀಸಸ್ ಅಂದರೆ ಏನೂ ಎನ್ನುವುದೇ ತಿಳಿದಿರದ ಜನರು ಪಾಲಿಸುತ್ತಿದದ್ದು ಹಿಂದೂ ಧರ್ಮದ ಸಂಪ್ರದಾಯವನ್ನ, ಪೂಜಿಸುತ್ತಿದದ್ದು ಸೂರ್ಯ,ವಾಯು ದೇವರನ್ನ. ಅಲ್ಲಿಗೆ ಕ್ರೈಸ್ತ ಧರ್ಮ ಕಾಲಿಟ್ಟಿದ್ದೆ16ನೇ ಶತಮಾನದಲ್ಲಿ.
ಹಾಗಾದರೆ ಅಲ್ಲಿದವರೆಲ್ಲ ಭಾರತೀಯರೆ? ಹಾಗಾದರೆ ಭಾರತದವರು ಹೇಗೆ ಅಲ್ಲಿಗೆ ಹೋದರು ಎಂಬ ಪ್ರಶ್ನೆಗಳಿಗೆ ಉತ್ತರ ಹುಡುಕಲು ಹೊರಟೆ.
ಭಾರತ ಏಷಿಯಾ ಖಂಡಕ್ಕೆ ಸೇರಿದ ದೇಶವೇ ಅಲ್ಲ. ಸುಮಾರು 50 ಮಿಲಿಯನ್ ವರ್ಷಗಳ ಮುಂಚೆ ಆಫ್ರಿಕಾ ದೇಶಕ್ಕೆ ಅಂಟಿಕೊಂಡಿದ್ದ ದೇಶ ಭಾರತ. ಭೂ ಗರ್ಭದ ಮೇಲ್ಪದರದ ನಿರಂತರ ಚಲನೆಯಿಂದ,ಆಫ್ರಿಕಾ ಖಂಡದಿಂದ ಭೇರ್ಪಟ್ಟು ಭಾರತ ಸಮುದ್ರದಲ್ಲಿ ತೇಲುತ್ತ, ನಂತರ 10 ಮಿಲಿಯನ್ ವರ್ಷಗಳ ಬಳಿಕ ಏಷಿಯಾ ಖಂಡಕ್ಕೆ ಡಿಕ್ಕಿ ಹೊಡೆಯುತ್ತದೆ, ಆಗಲೇ ಹಿಮಾಲಯ ಪರ್ವತಗಳು ಭೂ ಘರ್ಷಣೆಯಿಂದ ಮೇಲೇರುತ್ತದೆ.
ನಿಮಗೆಲ್ಲ ತಿಳಿದಂತೆ ಮಾನವನ ಮೊದಲ ಉಗಮ ಆಫ್ರಿಕಾದಲ್ಲಿ. ಅವನು ಸಂಪೂರ್ಣ ಮಾನವನಾಗುವುದು 12 ಸಾವಿರ ವರ್ಷದ ಮುಂಚೆ. ಅಂದರೆ ವಿಕಾಸ ಪಥದಲ್ಲಿರುವಾಗಲೇ ಆಫ್ರಿಕಾದಿಂದ ಭೇರ್ಪಟ್ಟು ಭಾರತ ಏಷಿಯಾ ಖಂಡ ಸೇರಿಯಾಗಿತ್ತು. ಇದು ಏಕೆ ಹೇಳಿದೆನೆಂದರೆ, ಮಾನವ ಸಂಪೂರ್ಣ ವಿಕಾಸವಾದನಂತರ ಅಲೆಮಾರಿಯಂತೆ ಜಾಗ ಬದಲಿಸುತ್ತಾ ಹೊರಡುವಾಗಲೇ ಅವನು ಅದೆಷ್ಟೋ ತಿಳಿಯದ ಪ್ರದೇಶಗಳಲ್ಲಿ ನೆಲೆಯೂರಿದ್ದು.
12 ಸಾವಿರ ವರ್ಷದ ಮುಂಚೆ ಶುರುವಾದ Ice-age ಅದೆಷ್ಟು ಪರಿಣಾಮ ಬೀರಿತ್ತು ಅಂದರೆ, ಆಗ ತಾನೇ ವಿಕಾಸಗೊಂಡಿದ್ದ ಮಾನವನಿಗೆ ಆಹಾರವಿರಲಿ ನೀರು ಕೂಡ ಸಿಗುವುದು ಕಷ್ಟವಾಗಿತ್ತು. ಆದ್ದರಿಂದಲೇ ಅವನು ಆಹಾರಕ್ಕಾಗಿ ಬೇರೆ ಪ್ರದೇಶಗಳಿಗೆ ವಲಸೆಹೋದ.
ಕೊನೆಗೆ ಏಷಿಯಾ ಖಂಡಕ್ಕೂ ಸೇರಿದ.
ಸುಮಾರು 5,200 ವರ್ಷಗಳ ಮುಂಚೆ ಸಿಂಧೂ ನಾಗರಿಕತೆ ಶುರುವಾಗುತ್ತದೆ. ಅದೇ ಸಮಯಕ್ಕೆ ಅವನು ಆಹಾರ ಹುಡುಕಿಕೊಂಡು ಬೇರೆ ಪ್ರದೇಶಗಳಿಗೆ ಹೋಗುತ್ತಾನೆ. ನೀವು ಇಂದಿನ world mapನೋಡಿದರೆ ತಿಳಿಯುತ್ತದೆ. ಭಾರತ, ನೇಪಾಳ, ಚೀನಾ,ಮಂಗೋಲಿಯ, ರಷ್ಯಾ ದಾಟಿದರೆ ಒಂದು ಚಿಕ್ಕ ಸಮುದ್ರದ ಬ್ರಿಡ್ಜ್ ಅದನ್ನ Beringia Bridge ಅಂತ ಕರೆಯುತ್ತಾರೆ. ಅದು 5 ಸಾವಿರ ವರ್ಷಗಳ ಮುಂಚೆ ಸಮುದ್ರದ ಮಟ್ಟ ಕಡಿಮೆ ಇದ್ದಾಗ ರಷ್ಯಾ ಮತ್ತು ಅಲಸ್ಕಾ ನಡುವೆ ಸಮುದ್ರ ಇರಲಿಲ್ಲ. ನಿಮಗೆ ತಿಳಿದಿರಲಿ ಅಲಸ್ಕಾ ರಷ್ಯಾಗೆ ಸೇರಿದ ಜಾಗ ಅದನ್ನ ಅಮೇರಿಕ ರಷ್ಯಯಿಂದ 1867ರಲ್ಲಿ ಕೊಂಡುಕೊಂಡಿತ
Comments
ಉ: ಮೂಲ ಅಮೇರಿಕನ್ನರು ಭಾರತೀಯರೆ?
ಕುತೂಹಲಕಾರಿ ವಿಷಯಗಳಿವೆ. ಧನ್ಯವಾದಗಳು.