ಮೂವತ್ತು ಮಳೆಗಾಲ - ಎಚ್.ಎಸ್. ವೆಂಕಟೇಶಮೂರ್ತಿಯವರ ಸಮಗ್ರ ಕಾವ್ಯ-ಭಾಗ -೧
'ಚಿನ್ನಾರಿ ಮುತ್ತ' ಚಿತ್ರದ ಹಾಡುಗಳು ( ' ಎಷ್ಟೊಂದ್ ಜನ ಯಾರು ನಮ್ಮೋರು? , ಹೇಗಿದ ಹೇಗಾದ ಗೊತ್ತಾ ನಮ್ಮ ಚಿನ್ನಾರಿ ಮುತ್ತ, ಚಂದ್ರ ನಿಂಗೆ ಕರುಣೆ ಇರ್ಲಿ ) ಕೇಳಿರಬಹುದು . ಅವುಗಳನ್ನು ಬರೆದವರು ಶ್ರೀ ಎಚ್.ಎಸ್.ವೆಂಕಟೇಶಮೂರ್ತಿ ಅವರು . ಈಗ ಅವರ ಮೂವತ್ತು ವರ್ಷಗಳ ಕಾವ್ಯ ಈಗ 'ಮೂವತ್ತು ಮಳೆಗಾಲ' ಎಂಬ ಹೆಸರಿನಲ್ಲಿ ಮೂರು ಭಾಗಗಳಲ್ಲಿ ಪ್ರಕಟವಾಗಿದೆ.
(ಪ್ರಕಾಶಕರು - 'ಸಂವಾದ', ಮಲ್ಲಾಡಿಹಳ್ಳಿ-೫೭೭೫೩೧ , ಚಿತ್ರದುರ್ಗ ಜಿಲ್ಲೆ. ) ಪ್ರತಿಯೊಂದು ಸಂಪುಟದ ಬೆಲೆ : ೨೫೦ ರೂಪಾಯಿಗಳು.
ಮೊದಲ ಭಾಗದಲ್ಲಿ , ಪರಿವೃತ್ತ , ಬಾಗಿಲು ಬಡಿವ ಜನ, ಮೊಖ್ತಾ , ಸಿಂದಬಾದನ ಆತ್ಮಕಥೆ , ಕ್ರಿಯಾಪರ್ವ , ಒಣಮರದ ಗಿಳಿಗಳು , ಗೀತೆಗಳು ಸಂಕಲನದ ಕವಿತೆಗಳು ಇವೆ.
ವೆಂಕಟೇಶಮೂರ್ತಿಯವರಿಂದ ತಮ್ಮ ಬಾಲ್ಯ , ಜೀವನ ಹಾಗೂ ಕಾವ್ಯಕೃಷಿಯ ಕುರಿತಾದ ಲೇಖನ , ಅವರ ಕಾವ್ಯ ಕುರಿತಾದ ಜಿ.ಎಸ್. ಶಿವರುದ್ರಪ್ಪ, , ಯು. ಆರ್ . ಅನಂತಮೂರ್ತಿ , ಕೀರ್ತಿನಾಥ ಕುರ್ತಕೋಟಿ , ಟಿ.ಪಿ. ಅಶೋಕ, ಎನ್.ಎಸ್. ಲಕ್ಷ್ಮಿನಾರ್ಆಯಣಭಟ್ಟ. , ಜಿ. ಎಸ್. ಅಮೂರ, ನರಹಳ್ಳಿ ಬಾಲಸುಬ್ರಹ್ಮಣ್ಯ ಮುಂತಾದವರ ಕೆಲವು ಮುಖ್ಯವಾದ ವಿಮರ್ಶೆಗಳು ಕಾವ್ಯಾಭ್ಯಾಸಿಗಳಿಗೆ ನೆರವಾದಾವು. ( ಆದರೆ ಅವೇ ಲೇಖನಗಳನ್ನು ಇತರ ಸಂಪುಟಗಳಲ್ಲಿಯೂ ಮುದ್ರಿಸಿದ್ದಾರೆ. ಮತ್ತೆ ಮತ್ತೆ ಮುದ್ರಣವನ್ನು ಬಿಟ್ಟಿದ್ದರೆ, ಬೆಲೆಯನ್ನು ಒಂದಿಷ್ಟು ಇಳಿಸಬಹುದಿತ್ತಲ್ಲವೆ? )