ಮೃತ ಸಂಜೀವಿನಿ

ಮೃತ ಸಂಜೀವಿನಿ

ಪುಸ್ತಕದ ಲೇಖಕ/ಕವಿಯ ಹೆಸರು
ತೀರ್ಥರಾಮ ವಳಲಂಬೆ
ಪ್ರಕಾಶಕರು
ಯಾನ ಪ್ರಕಾಶನ, ಅ.ಪೆ.ಸಂಖ್ಯೆ ೫೮೫, ಕಂಕನಾಡಿ, ಮಂಗಳೂರು-೫೭೫೦೦೨
ಪುಸ್ತಕದ ಬೆಲೆ
ರೂ.120.00

ಪತ್ರಕರ್ತ ತೀರ್ಥರಾಮ ವಳಲಂಬೆಯವರ ಲೇಖನಿಯಿಂದ ಮೂಡಿ ಬಂದ ಒಂದು ಅಪೂರ್ವ ಪುಸ್ತಕ ಎಂದರೆ ತಪ್ಪಾಗದು. ಪಾಕೇಟ್ ಸೈಜ್ ಆಕಾರ ಹೊಂದಿರುವ ಈ ಪುಸ್ತಕವನ್ನು ತೀರ್ಥರಾಮ ಇವರು ಬಹಳಷ್ಟು ಅಧ್ಯಯನ ಮಾಡಿ ಬರೆದಿದ್ದಾರೆ. ಅವರೇ ಹೇಳಿರುವಂತೆ ಈ ಪುಸ್ತಕದ ಕಲ್ಪನೆ ಸಾಕಾರಗೊಳ್ಳಬೇಕಾದರೆ ಅದಕ್ಕಾಗಿ ನಾನು ಸಾಕಷ್ಟು ಅಧ್ಯಯನ ಹಾಗೂ ಅಭ್ಯಾಸಗಳನ್ನು ಮಾಡಬೇಕಾಗಿತ್ತು. ಆಧುನಿಕ ವಿಜ್ಞಾನ ಇಷ್ಟೊಂದು ಮುಂದುವರೆದಿರುವಾಗ ಜನರನ್ನು ವೈಜ್ಞಾನಿಕವಾಗಿ ಯೋಚಿಸಲು ಪ್ರೇರೇಪಿಸಬೇಕೇ ಹೊರತು ನಮ್ಮ ಯಾವುದೇ ಬರವಣಿಗೆಯ ಸಾಲುಗಳು ಜನರಲ್ಲಿ ಗೊಂದಲಗಳನ್ನು ಮೂಡಿಸಬಾರದು ಎನ್ನುವ ನಿಲುವು ನನ್ನದಾಗಿತ್ತು. ಈ ಮಾತುಗಳನ್ನು ವಳಲಂಬೆಯವರು ಉಳಿಸಿಕೊಂಡಿದ್ದಾರೆ. ಅವರ ಬಿಡುವಿಲ್ಲದ ಕಾರ್ಯ ಚಟುವಟಿಕೆಗಳ ನಡುವೆ ಈ ಅಧ್ಯಯನ, ಯೋಗ, ಪ್ರಾಣಾಯಾಮ, ಸನ್ಮೋಹಿನಿ, ರೇಖಿ, ಮುದ್ರೆ... ಹೀಗೆ ಹಲವರು ವಿಷಯಗಳನ್ನು ಅರ್ಥೈಸಿ ಕೊಂಡಿದ್ದಾರೆ. 

ಈ ಪುಸ್ತಕದಲ್ಲಿ ಕೆಲವು ಅತೀಂದ್ರಿಯ ವಿದ್ಯೆಗಳ ಬಗೆಗೂ ಮಾಹಿತಿ ನೀಡಿದ್ದಾರೆ. ಇವೆಲ್ಲಾ ನಿಜಕ್ಕೂ ಸಾಧ್ಯವಾಗುತ್ತವೆಯೇ ಎಂಬ ಪ್ರಶ್ನೆಗಳು ಲೇಖಕರ ಮನದಲ್ಲಿ ಮೂಡಿತ್ತಾದರೂ ಪ್ರಯತ್ನ ಪಟ್ಟರೆ ಎಲ್ಲರಿಗೂ ಸಾಧ್ಯವಾಗಬಹುದಾದಷ್ಟು ಸರಳವಾಗಿದೆ. ಅದನ್ನೇ ತಪಸ್ವಿಗಳು ಅಥವಾ ಯೋಗಿಗಳು ಧ್ಯಾನ, ತಪಸ್ಸು, ಸಿದ್ದಿಗಳ ಹೆಸರಿನಲ್ಲಿ ಮಾಡುವುದಾದರೆ ನಮ್ಮಂಥಹ ಸಾಮಾನ್ಯ ಮನುಷ್ಯರಿಗೇಕೆ ಸಾಧ್ಯವಿಲ್ಲ ಎಂಬುವುದು ಈ ಲೇಖಕರ ವಾದ. ನಮ್ಮ ಬದುಕಿಗೆ ಶ್ವಾಸ ಅಥವಾ ಉಸಿರಾಟ ಎಷ್ಟು ಮುಖ್ಯವೋ ಅಷ್ಟೇ ಅಗತ್ಯ ನಂಬಿಕೆ ಮತ್ತು ವಿಶ್ವಾಸಾರ್ಹತೆ. 

ಅನುಕ್ರಮಣಿಯಲ್ಲಿ ೧೧ ಅಧ್ಯಾಯಗಳಿವೆ. ಪ್ರಕೃತಿದತ್ತ ಆರೋಗ್ಯ, ನಾಗರಿಕತೆ ಮತ್ತು ಅನಾರೋಗ್ಯ, ದೀರ್ಘಾಯುಷ್ಯದ ಸರಳ ಸತ್ಯ, ಆರೋಗ್ಯಕರ ಬದುಕಿಗೆ ಸರಳ ಸೂತ್ರಗಳು ಹೀಗೆ ಅಧ್ಯಯಗಳು ಇವೆ. ೨೦೧೩ರಲ್ಲಿ ಮೊದಲ ಮುದ್ರಣ ಕಂಡ ಪುಸ್ತಕ ಈಗಲೂ ಪುನರ್ ಮುದ್ರಣ ಕಾಣುತ್ತಿರುವುದು ಪುಸ್ತಕದ ಜನಪ್ರಿಯತೆಗೆ ಸಾಕ್ಷಿ. ೧೮೪ ಪುಟಗಳನ್ನು ಪುಸ್ತಕ ಹೊಂದಿರುತ್ತದೆ.