ಮೃತ ಸಮುದ್ರದ ಬಗ್ಗೆ ಒಂದಿಷ್ಟು…

ಮೃತ ಸಮುದ್ರದ ಬಗ್ಗೆ ಒಂದಿಷ್ಟು…

ಏನಿದು ಮೃತ ಸಮುದ್ರ ಅಥವಾ ಡೆಡ್ ಸೀ ಎಂದು ಕೊಂಡಿರಾ? ಬಹುತೇಕ ಮಂದಿ ಈ ಸಮುದ್ರದ ಬಗ್ಗೆ ಕೇಳಿ ಇರುವಿರಿ. ಆದರೆ ಇದಕ್ಕೆ ಆ ಹೆಸರು ಹೇಗೆ ಬಂತು ಮತ್ತು ಅದರ ವಿಶೇಷತೆಗಳು ಏನೇನು ಎಂಬುದನ್ನು ತಿಳಿದುಕೊಳ್ಳೋಣ. ನಿಜಕ್ಕೂ ನೋಡಲು ಹೋದರೆ ಇದೊಂದು ಸಮುದ್ರವೇ ಅಲ್ಲ. ಇದು ಇಸ್ರೇಲ್ ಮತ್ತು ಜೋರ್ಡಾನ್ ದೇಶಗಳ ಭೂಪ್ರದೇಶಗಳಿಂದ ಆವೃತ್ತವಾದ ಒಂದು ಕೊಳ ಅಷ್ಟೇ. ಆದರೆ ಇದರ ನೀರು ಎಷ್ಟು ಉಪ್ಪಾಗಿದೆಯೆಂದರೆ ಯಾವುದೇ ಜೀವ ಜಂತುಗಳು ಇದರಲ್ಲಿ ವಾಸಿಸುವುದು ಸಾಧ್ಯವೇ ಇಲ್ಲ. ಜೀವಿಗಳ ಮಾತಿರಲಿ ಯಾವುದೇ ಸಸ್ಯ ಸಂಕುಲಗಳೂ ಬದುಕುವುದಿಲ್ಲ. ಈ ಕಾರಣದಿಂದಲೇ ಇದು ‘ಮೃತ' ಸಮುದ್ರ ಎಂದು ಕರೆಯುತ್ತಾರೆ.

ಎಲ್ಲಾ ನದಿಗಳು ಸಮುದ್ರ ಸೇರುತ್ತವೆ. ಆದರೆ ಈ ಮೃತ ಸಮುದ್ರ ತನ್ನಲ್ಲಿ ಸೇರಿಕೊಂಡ ನದಿ ಅಥವಾ ಯಾವುದೇ ನೀರನ್ನು ಹೊರ ಬಿಡುವುದಿಲ್ಲ. ಸೂರ್ಯನ ಶಾಖದಿಂದ ಮಾತ್ರವೇ ಇದರ ನೀರು ಮಾತ್ರವೇ ಆವಿಯಾಗುತ್ತದೆ. ಆದುದರಿಂದ ಸಮುದ್ರದಲ್ಲಿನ ಉಪ್ಪಿನ ಪ್ರಮಾಣ ಅತ್ಯಂತ ಅಧಿಕವಾಗಿರುತ್ತದೆ. ಬೇರೆ ಸಮುದ್ರಗಳಲ್ಲಿ ಸೇರಿಕೊಂಡ ನೀರು ಹೊರಗೆ ಹೋಗಲು ಹಲವಾರು ದಾರಿಗಳಿವೆ. ಆದರೆ ಮೃತ ಸಮುದ್ರದ ನೀರು ಆವಿಯಾಗುವುದೊಂದೇ ದಾರಿ. ಹೀಗಾಗುವುದರಿಂದ ಸಮುದ್ರದಲ್ಲಿ ಉಪ್ಪಿನ ಪ್ರಮಾಣ ಅಧಿಕವಾಗುತ್ತದೆ. ಇದರಿಂದ ಯಾವುದೇ ಜೀವಿಗೆ ಜೀವಿಸಲು ಸಾಧ್ಯವಾಗುವುದಿಲ್ಲ. 

ಪ್ರಪಂಚದಲ್ಲೇ ಅತೀ ಅಧಿಕ ಪ್ರಮಾಣದ ಉಪ್ಪಿನ ಅಂಶ ಇರುವುದು ಮೃತ ಸಮುದ್ರದಲ್ಲೇ. ಬೇರೆ ಸಮುದ್ರದ ಉಪ್ಪಿನ ಪ್ರಮಾಣಕ್ಕಿಂತ ೬ ಪಟ್ಟು ಅಧಿಕ ಉಪ್ಪಿನ ಪ್ರಮಾಣ ಮೃತ ಸಮುದ್ರದಲ್ಲಿದೆ. ಇದು ಇರುವ ಜಾಗವು ಮರುಭೂಮಿಯ ಪ್ರದೇಶದಿಂದ ಆವೃತ್ತವಾಗಿರುವುದರಿಂದ ಮಳೆಯ ಪ್ರಮಾಣವೂ ಕಮ್ಮಿ. ಆದುದರಿಂದ ಉಪ್ಪಿನ ಪ್ರಮಾಣ ಅಧಿಕವಾಗಿಯೇ ಇರುತ್ತದೆ. ಮೃತ ಸಮುದ್ರದಲ್ಲಿ ಉಪ್ಪಿನ ಅಂಶ ಅಧಿಕವಾಗಿರುವುದರಿಂದ ಯಾವುದೇ ಜೀವಿ ಬೇಗನೇ ಮುಳುಗುವುದಿಲ್ಲ. ಈ ಪ್ರಪಂಚದಲ್ಲಿ ಏನೆಲ್ಲಾ ಆಶ್ಚರ್ಯಗಳಿವೆಯೋ?

ಚಿತ್ರ: ಅಂತರ್ಜಾಲ ಕೃಪೆ