ಮೆಂತೆ ಸಿಹಿ ದೋಸೆ

ಮೆಂತೆ ಸಿಹಿ ದೋಸೆ

ಬೇಕಿರುವ ಸಾಮಗ್ರಿ

ನೆನೆಸಿದ ದೋಸೆ ಅಕ್ಕಿ ೨ ಕಪ್, ಮೆಂತೆ ೪ ಸಣ್ಣ ಚಮಚ, ಅವಲಕ್ಕಿ ಕಾಲು ಕಪ್, ಸ್ವಲ್ಪ ತೆಂಗಿನ ಕಾಯಿ ತುರಿ, ಹಸಿ ಶುಂಠಿ ಸಣ್ಣ ತುಂಡು, ಬೆಲ್ಲ ಅರ್ಧ ಕಪ್, ತೆಂಗಿನ ಎಣ್ಣೆ/ತುಪ್ಪ, ಸ್ವಲ್ಪ ಬೆಣ್ಣೆ, ರುಚಿಗೆ ತಕ್ಕಷ್ಟು ಉಪ್ಪು. (ಬೇಕಿದ್ದಲ್ಲಿ ರಾಗಿ ಹುಡಿ ೪ ಚಮಚ)

 

ತಯಾರಿಸುವ ವಿಧಾನ

ನೆನೆಸಿದ ದೋಸೆ ಅಕ್ಕಿ, ನೆನೆಸಿದ ಮೆಂತೆ, ತೊಳೆದ ಅವಲಕ್ಕಿ, ರಾಗಿಹುಡಿ (ಹಾಕದಿದ್ದರೂ ಆಗುತ್ತದೆ), ಉಪ್ಪು, ಸ್ವಲ್ಪ ತೆಂಗಿನಕಾಯಿ ತುರಿ, ಜಜ್ಜಿದ ಹಸಿ ಶುಂಠಿ, ಬೆಲ್ಲ ಎಲ್ಲವನ್ನೂ ನುಣ್ಣಗೆ ರುಬ್ಬಿ, ಅರ್ಧ ಗಂಟೆ ಮುಚ್ಚಿಡಬೇಕು. ಮಾಮೂಲಿನಂತೆ ಕಾವಲಿಯಲ್ಲಿ ದೋಸೆ ಎರೆದು ತುಪ್ಪ ಅಥವಾ ತೆಂಗಿನ ಎಣ್ಣೆ, ಬೆಣ್ಣೆ ಹಾಕಿ ಕವುಚಿ ಹಾಕಿ ಮಗುಚಿ. ಬಿಸಿ ಬಿಸಿ ಮೆಂತೆ ದೋಸೆ ಬಹಳ ರುಚಿ. ಆರೋಗ್ಯಕರ ದೋಸೆ ಇದು.