ಮೆಂತೆ ಸೊಪ್ಪಿನ ಚಪಾತಿ
ಬೇಕಿರುವ ಸಾಮಗ್ರಿ
ಗೋಧಿ ಹುಡಿ ೪ ಕಪ್, ಸಣ್ಣಗೆ ತುಂಡರಿಸಿದ ಮೆಂತೆ ಸೊಪ್ಪು ೨ ಕಪ್, ಎಣ್ಣೆ ೨ ಚಮಚ, ರುಚಿಗೆ ತಕ್ಕಷ್ಟು ಉಪ್ಪು, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಅಜವಾನ (ಓಮ) ಸ್ವಲ್ಪ.
ತಯಾರಿಸುವ ವಿಧಾನ
ಗೋಧಿ ಹುಡಿಗೆ ೨ಕಪ್ ಸ್ವಚ್ಛಗೊಳಿಸಿ ಸಣ್ಣಗೆ ತುಂಡುಮಾಡಿಟ್ಟ ಮೆಂತೆಸೊಪ್ಪನ್ನು ಸೇರಿಸಬೇಕು. ಅದೇ ಹಿಟ್ಟಿಗೆ ಎಣ್ಣೆ, ಉಪ್ಪು, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಅಜವಾನ(ಓಮ) ಸೇರಿಸಿ ಚೆನ್ನಾಗಿ ಮಿಶ್ರಮಾಡಬೇಕು. ೧೦ ನಿಮಿಷ ಮುಚ್ಚಿಟ್ಟು ಚಪಾತಿ ಲಟ್ಟಿಸಿ ಕಾಯಿಸಬೇಕು. ದಾಲ್, ಪಲ್ಯ, ಬೆಣ್ಣೆ ಜೊತೆ ತಿನ್ನಲು ಬಲು ರುಚಿ.
-ರತ್ನಾ ಕೆ.ಭಟ್ ತಲಂಜೇರಿ