ಮೆಂತ್ಯದ ಸ್ಪೆಷಲ್ ಗೊಜ್ಜು
ಬೇಕಿರುವ ಸಾಮಗ್ರಿ
ಮೆಂತ್ಯೆ ಕಾಳುಗಳು - ೬ ಚಮಚ, ಒಣಮೆಣಸಿನ ಕಾಯಿ - ೪-೫, ತೆಂಗಿನ ತುರಿ - ಅರ್ಧ ಕಪ್, ಹುರಿಗಡಲೆ - ೩ ಚಮಚ, ಅರಶಿನ ಹುಡಿ - ಕಾಲು ಚಮಚ, ಬೆಲ್ಲದ ಹುಡಿ - ೩ ಚಮಚ, ಹುಣಸೆ ರಸ - ೩ ಚಮಚ, ಎಣ್ಣೆ - ಕಾಲು ಕಪ್, ಸಾಸಿವೆ - ೧ ಚಮಚ, ಇಂಗು - ಕಾಲು ಕಪ್, ಕತ್ತರಿಸಿದ ಕೊತ್ತಂಬರಿ ಸೊಪ್ಪು - ೪ ಚಮಚ, ರುಚಿಗೆ ತಕ್ಕಷ್ಟು ಉಪ್ಪು.
ತಯಾರಿಸುವ ವಿಧಾನ
ತೆಂಗಿನ ತುರಿ, ಒಣಮೆಣಸಿನ ಕಾಯಿ, ಹುರಿಗಡಲೆ, ಅರಶಿನ ಹುಡಿ ಹಾಕಿ ರುಬ್ಬಿಕೊಳ್ಳಿ. ಬಾಣಲೆಯಲ್ಲಿ ಎಣ್ಣೆ ಕಾಯಲಿರಿಸಿ, ಸಾಸಿವೆ, ಇಂಗು ಒಗ್ಗರಣೆ ಮಾಡಿ, ಒಗ್ಗರಣೆಗೆ ಮೆಂತ್ಯೆ ಕಾಳುಗಳನ್ನು ಹಾಕಿ ಬಾಡಿಸಿ. ರುಬ್ಬಿದ ಮಿಶ್ರಣ, ಉಪ್ಪು, ಹುಣಸೆ ರಸ, ಬೆಲ್ಲದ ಹುಡಿ ಹಾಕಿ ಕುದಿಸಿ, ಒಲೆಯಿಂದ ಕೆಳಗಿಳಿಸಿ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ.