ಮೆಂತ್ಯೆ ಸೊಪ್ಪಿನ ಪೂರಿ

ಮೆಂತ್ಯೆ ಸೊಪ್ಪಿನ ಪೂರಿ

ಬೇಕಿರುವ ಸಾಮಗ್ರಿ

ಅಕ್ಕಿ ಹಿಟ್ಟು - ೩ ಕಪ್, ಚಿರೋಟಿ ರವೆ - ೧ ಕಪ್, ಮೈದಾ - ೩ ಚಮಚ, ಕತ್ತರಿಸಿದ ಮೆಂತ್ಯೆ ಸೊಪ್ಪು - ೨ ಕಪ್, ಹಸಿ ಮೆಣಸಿನಕಾಯಿ - ೫, ಕತ್ತರಿಸಿದ ಕೊತ್ತಂಬರಿ ಸೊಪ್ಪು - ೪ ಚಮಚ, ಜೀರಿಗೆ ಹುಡಿ - ೩ ಚಮಚ, ಎಳ್ಳು ಹುಡಿ - ೨ ಚಮಚ, ಕರಿಯಲು ಎಣ್ಣೆ, ರುಚಿಗೆ ತಕ್ಕಷ್ಟು ಉಪ್ಪು.

ತಯಾರಿಸುವ ವಿಧಾನ

ಅಕ್ಕಿ ಹಿಟ್ಟು, ರವೆ ಹಾಗೂ ಮೈದಾಗಳನ್ನು ಸೇರಿಸಿಡಿ. ಈ ಮಿಶ್ರಣಕ್ಕೆ ಮೆಂತ್ಯೆ ಸೊಪ್ಪು, ಕೊತ್ತಂಬರಿ ಸೊಪ್ಪು, ಹಸಿ ಮೆಣಸಿನಕಾಯಿ, ಉಪ್ಪು, ಜೀರಿಗೆ ಮತ್ತು ಎಳ್ಳು ಹುಡಿಗಳನ್ನು ಸೇರಿಸಿ ನೀರಿನೊಂದಿಗೆ ಗಟ್ಟಿಯಾಗಿ ಪೂರಿಯ ಹದಕ್ಕೆ ಕಲಸಿ. ಅರ್ಧ ಗಂಟೆ ನೆನೆಸಿಡಿ. ನಂತರ ಹಿಟ್ಟಿನ ಮಿಶ್ರಣದಿಂದ ಸಣ್ಣ ಸಣ್ಣ ಉಂಡೆಗಳನ್ನು ಮಾಡಿ ಪೂರಿಯ ಹದಕ್ಕೆ ಲಟ್ಟಿಸಿ, ಕಾಯಿಸಿದ ಎಣ್ಣೆಯಲ್ಲಿ ಕರಿದರೆ ರುಚಿಕರವಾದ ಮೆಂತ್ಯೆ ಸೊಪ್ಪಿನ ಪೂರಿ ತಿನ್ನಲು ರೆಡಿ.