ಮೆಚ್ಚುವಂತಿರಲಿ…

ಮೆಚ್ಚುವಂತಿರಲಿ…

ಕವನ

ಆದಿಯೊಳು ಬರೆದರೆ ಸಾಕೆ

ಒಳಗೆ ಗೋಳೆ ಇದ್ದರೆ

ಹಣ್ಣಿನೊಳು ಹುಳವು ಇರೆ

ಬಾಯಲಿಟ್ಟು ತಿನುವರೆ ?

 

ಬರೆದ ಬರಹವನೋದಿ ನೋಡೆ

ಬರಲಿ ಹರುಷ ಬರೆದವಗೆ

ಕೊಡದೆಯಿರಲು ಹರುಷ ಅವಗೆ

ಓದುಗರಿಗದುವು ಸಾಧ್ಯವೆ ?

 

ಗದ್ಯವದುವೊ ಪದ್ಯವದುವೊ

ಮನವ ಸೇರುವಂತಿರಲಿ

ತಲೆಯ ಕೆರೆದು ಮಾನಸಿಕದಿ

ಹುಚ್ಚು ಹಿಡಿಯಬೇಕೇನು ?

 

ಬರೆದ ಕ್ಷಣದಿ ತಿನಿಸಬೇಡಿ

ಹಲವು ಸಾರಿ ನೋಡಿರಿ

ತಲೆಗೆ ಮೇವ ಕೊಡುವ ರೀತಿ

ಬರೆದು ಪ್ರಕಟ ಮಾಡಿರಿ !

 

ಕೊರೆಯಬೇಡಿ ವಿಷಯವಿರಲಿ

ಜಡತೆ ಬೇರ ಹೊಸಕಿರಿ

ತಿಳುವಳಿಕೆಯ ಸತ್ಯವಿರಲಿ

ಜಗದ ಜನರು ಹೊಗಳಲಿ !

***

ಇದು ಎಂಥಾ ಮಾಧ್ಯಮವಯ್ಯಾ!

ಮೇಲಿನಿಂದ

ಬಿದ್ದ

ಪಿಲ್ಲರಿನ

ಅಡಿಯಲ್ಲಿ

ಸಿಲುಕಿ

ಪ್ರಾಣತೆತ್ತ

ಜೀವಗಳಿಗೆ

ಬೆಲೆ ಇಲ್ಲ!

ಅದೇ

ಪಿಲ್ಲರಿನಿಂದ

ಉದುರಿಸಿದ

ಕಂತೆ

ನೋಟುಗಳಿಗೆ

ಮಾಧ್ಯಮದವರ

ಅರಚಾಟ

ಕಿರುಚಾಟ ?

ಎಂಥಾ

ಲೋಕವಯ್ಯಾ ?!

-ಹಾ ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್