ಮೆರಿಲ್ ಲಿಂಚ್ ಬ್ಯಾಂಕ್, ಬ್ಯಾಂಕ್ ಆಫ್ ಅಮೆರಿಕಾ ತೆಕ್ಕೆಗೆ

ಮೆರಿಲ್ ಲಿಂಚ್ ಬ್ಯಾಂಕ್, ಬ್ಯಾಂಕ್ ಆಫ್ ಅಮೆರಿಕಾ ತೆಕ್ಕೆಗೆ

ಬರಹ

ಅಮೆರಿಕಾದ ಹಳೆಯ ಬ್ಯಾಂಕ್‌ಗಳಲ್ಲಿ ಒಂದಾದ ಮೆರಿಲ್ ಲಿಂಚ್ ಬ್ಯಾಂಕ್ ಮಾರಾಟವಾಗಿದೆ. ಖರೀದಿಸಿದವರು ಬ್ಯಾಂಕ್ ಆಫ್ ಅಮೆರಿಕಾ.ಅಲ್ಲಿನ ಆರ್ಥಿಕ ಹಿನ್ನಡೆಯ ಪರಿಣಾಮದಿಂದ ಕಳೆದ ಒಂದೂವರೆ ವರ್ಷದಿಂದ ಇಪ್ಪತ್ತು ಬಿಲಿಯನ್ ಡಾಲರು ನಷ್ಟ ಅನುಭವಿಸಿದ ತೊಂಭತ್ತನಾಲ್ಕು ವರ್ಷದ ಬ್ಯಾಂಕು ಐವತ್ತು ಬಿಲಿಯನ್ ಡಾಲರಿಗೆ ಮಾರಾಟವಾಯಿತು.ಲೆಹಮಾನಬ್ರದರ್ಸ್ ಬ್ಯಾಂಕ್ ಖರೀದಿಗೆ ಯಾರೂ ಮುಂದಾಗದೆ ಅದು ದಿವಾಳಿ ಆದರೆ,ಮೆರಿಲ್ ಲಿಂಚ್ ತುಸು ಸಮಾಧಾನಕರ ರೀತಿಯಿಂದ ಅಳಿದು ಹೋಯಿತು.