ಮೆಱವಣಿ, ಮೆಱವಣಿಗೆ

ಮೆಱವಣಿ, ಮೆಱವಣಿಗೆ

Comments

ಬರಹ

ಮೆಱವಣಿ, ಮೆರವಣಿ, ಮೆಱವಣೆ, ಮೆಱೆವಣಿ (ನಾ)
=ಹೆಚ್ಚುಗಾರಿಕೆ; ಅತಿಶಯ; ಹೆಚ್ಚಳ
ನೈವೇದ್ಯವೇಳೆಯೊಳಮರ್ದು ಮೆಱವಣಿಯಲಿ ಸುರಗಿಯಂ ಕಿತ್ತು ಹರಣಕ್ಕೆ ಅಮಮವೊರೆಯಂ ಕೊಯ್ವವೋಲುತ್ತ ಮನದಂ ಕೆಲದಲಿ ಮಡಗಿ ( ಬಸವಪುರಾಣ ೩೩.೧೦)

=ದೇವರು, ಪೀಠಾಧಿಪತಿಗಳು, ಮಧೂವರರು ಮುಂತಾದವರನ್ನು ಆಡಂಬರದಿಂದ ಊರಲ್ಲಿ ಸುತ್ತಾಡಿಸಿಕೊಂಡು ಬರುವುದು; ಉತ್ಸವ
ನಂದೀಧ್ವಜದ ಮೆರವಣಿ ಕಾಯಿಕಗಳೆಂಬ ಸಂಗವನು ಪರಿಹರಿಸಿ (ಬಿಜ್ಜಳಪುರಾಣ ೬೮.೧೦)

ಮೆಱವಣೆಯ ನೆಱೆ ಬೇಂಟೆಕಾಱಂಗುಱೆ ಮೃಗಂಗಳನಸುಗಳೆವುದೇತಱ ಘನಂ (ಬಸವಪುರಾಣ ೩೪.೩೬)

ಪುರಹರಂ ಪೆಱೆಮಿಂಡದೇವನ ನಿರತಭಕ್ತಿಯ ಮೆಱೆವಣಿಗೆ ಕೂರ್ತು (ಬಸವಪುರಾಣ ೨೭.೭೫)

ಮೆಱವಣಿಗೆ, ಮೆರವಣಿಗೆ, ಮೆರವಳಿಗೆ, ಮೆರೆವಣಿಗೆ (ನಾ)
=ಮೇಲ್ಮೆ; ಹೆಚ್ಚಳ; ಅತಿಶಯ
ವರಚರಿತಗಳನೆಯ್ದೆ ನಾದಸಭರಿತಮಾಗಿರೆ ಪಾಡುತೊಬ್ಬೊಬ್ಬರ ಮಹಾಭಕ್ತರ ಮೆಱವಣಿಗೆಗಳ ಶಿವನ ಮುಂದೆ ಪರಮಭಕ್ತನು ನಂಬಿ ಪೊಗಳುವ ಪರಿಯದೀ ಪರಿ ಕೇಳು ನೀನು ( ಬಸವಪುರಾಣ ೨೭.೬೯)

ನದಿಯಂತೆ ಪರಿದಿರ್ದ ನಾಗರಿಕನರನಾರಿಯರ ದಳದ ಮೆರವಣಿಗೆ ಚಲಿಸಿತು ಕಡಲ ತಡಿಗೆ (ಚಿತ್ರಾಂಗ ೮೮.೨೪೪೦)

Procession = ಒಂದರ ಹಿಂದೆ ಒಂದರಂತೆ ವ್ಯವಸ್ಥಿತವಾದ ಸಾಲಿನಲ್ಲಿ ಜನರ (ಅಥವಾ ದೋಣಿ ಮೊದಲಾದವುಗಳ) ತಂಡ ಮುಂದುವರಿಯು(ತ್ತಿರು)ವುದು (ಇಂಗ್ಲಿಷ್ ಕನ್ನಡ ನಿಘಂಟು)

[ತಮಿಳು: ಮೆರುವಣೈ; ತೆಲುಗು: ಮಱವಡಿ, ಮೆಱವಣಿ, ಮೆರವಡಿ, ಮೆರವಣಿ; ತುಳು: ಮೆರವಣಿಗೆ]

(ಕನ್ನಡ ಸಾಹಿತ್ಯ ಪರಿಷತ್ತಿನ ಕನ್ನಡ ನಿಘಂಟಿನಿಂದ ತೆಗೆದುಕೊಳ್ಳಲಾಗಿದೆ)

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet