ಮೇಜರ್ ಧ್ಯಾನ್ ಚಂದ್

ಮೇಜರ್ ಧ್ಯಾನ್ ಚಂದ್

ಕವನ

ಭಾರತಾಂಬೆಯ ಹೆಮ್ಮೆಯ ಸುಕುಮಾರ

ಹಾಕಿ ಕ್ರೀಡೆಯಲಿ ಕಿರೀಟ ತೊಡಿಸಿದ ಹಮ್ಮೀರ

ಶಿಸ್ತಿನ ಸಿಪಾಯಿ ಮೇಜರ್ ಧ್ಯಾನ್ ಚಂದ್

ಇತಿಹಾಸದ ಪುಟಗಳಲಿ ನೆಲೆನಿಂತ ಧೀರ

 

ಹಗಲು ನಿಷ್ಠೆಯಲಿ ಸೇನಾ ಕರ್ತವ್ಯ

ರಾತ್ರಿ ಬೆಳದಿಂಗಳಲಿ ಹಾಕಿ ಅಭ್ಯಾಸ

ಸೇನಾ ಕ್ರೀಡಾ ಸ್ಪರ್ಧೆಗಳಲಿ ಸತತ  ಭಾಗಿ

ಪಟ್ಟು ಬಿಡದ ಕಾಯಕ ಯೋಗಿ

 

ಮೂರು ಸಲ ಸ್ವರ್ಣ ಪದಕ ವಿಜೇತ

ಹ್ಯಾಟ್ರಿಕ್ ಗೋಲು ಸಿಡಿಸಿದ  ಸೈನಿಕ ಪುತ್ರ

ನಿಜವಾಗಿಯೂ ಭಾರತರತ್ನ ಸಿಗಬೇಕಾದ ಮಾಣಿಕ್ಯ

ಪ್ರತಿಭೆಗೆ ತಕ್ಕ ಮನ್ನಣೆ ಸಿಗದ ನೋವು

 

ನೆನಪಿನ ಹಾಕಿ ಕ್ರೀಡಾಂಗಣ ದೆಹಲಿಯಲಿ ಸ್ಥಾಪನೆ

ಪದ್ಮಭೂಷಣ ಅರಸಿ ಬಂತು ಮುಡಿಗೆ

ಜನುಮ ದಿನ ರಾಷ್ಟ್ರೀಯ ಕ್ರೀಡಾದಿನ ಘೋಷಣೆ

ಅತ್ಯುನ್ನತ ಪ್ರಶಸ್ತಿ ಖೇಲ್ ರತ್ನಕ್ಕೆ ತಮ್ಮ ನಾಮ

 

ಸನ್ಮಾನ್ಯರ ಹೆಸರು ಎಂದೆಂದು ಅಜರಾಮರ

ಸದಾ ಸ್ಫೂರ್ತಿಯ ಕಾರಂಜಿಯ ಚಿಲುಮೆ

ವಿಶೇಷ ಗೌರವ ಸ್ಮರಣೆ ಈ ದಿನ

ಹಾಕಿ ದಿಗ್ಗಜ ನವರತ್ನ ಕ್ರೀಡಾಪಟುಗಳಿಗೆ ಆದರ್ಶ

(ಹಾಕಿ ಆಟಗಾರ ಮೇಜರ್ ಧ್ಯಾನ್ ಚಂದ್ ರ ೧೧೮ನೇ ಜನ್ಮ ದಿನ - ರಾಷ್ಟ್ರೀಯ ಕ್ರೀಡಾದಿನ)

-ರತ್ನಾ ಕೆ ಭಟ್ ತಲಂಜೇರಿ, ಪುತ್ತೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್