ಮೇಲೇರು ನೀ ಇರುವೆ.

ಮೇಲೇರು ನೀ ಇರುವೆ.

ಕವನ

 ಮೇಲೇರು ನೀ ಇರುವೆ.
ಒಣಜಂಭದೊಡೆ ಸಾಯ್ವೆ.
ನಿನ್ನ ದೇಹಕೂ ಮೀರಿದ ಭಾರ ಸಂಸಾರ.
ಹೊರೆ ಹೊತ್ತರೆ ಮಾತ್ರ ಮಳೆಗಾಲಕಾಧಾರ.
ಒಗ್ಗಟ್ಟೆ ಬಲವೆಂದು ಜೊತೆಯಲ್ಲೆ ಸಾಲು.
ಗುರಿ ಸೇರೂ ನಿಸ್ವಾರ್ಥಿ,ಬಿಡೆ ನೀನು ನೀತಿ ಸಾಲು.

ಬ್ರಹ್ಮನೇ ಬಿದ್ದರೂ ನಿನ್ನಯ ದಾರಿಯಲಿ
ಬಳಸಿ ನೀ ಸಾಗುವೆ ಬದಲಾದ ಪಥದಲಿ.
ಮಳೆಯೆಂದು,ಚಳಿಯೆಂದು,ಮರವೆಂದು,ಶಿಲೆಯೆಂದು
ಹಲಕಾರಣದ ಮೈಗಳ್ಳತನ ಬೇಡೆಂದು
ಕೂಡೆಂದು ಆಹಾರ ಕಾಣೆ ನಾಳೆಯ ಎಂದು
ಅಗುಳಗುಳು ಕೂಡಿದರೆ ಮನವರಳಿ ಅನುಬಂಧ
ಅರಿವ ಭಾವವು ಬೆಸೆಯೆ ಮನೆಯರಳೊ ಸಂಬಂಧ