ಮೈಕ್ಸೋಮೆಟಾಸಿಸ್.....
ಚೌಕಾಕಾರದ ತಾತ್ಕಾಲಿಕ ಕಟ್ಟಡ, ಮದ್ಯ ನೀಲಿ ಬಾನನ್ನೇ ನೋಡ್ತಾ ..ವರ್ಷಕ್ಕೊಮ್ಮೆ ಬರೋ ವರುಣನ ಭೇಟಿಗಾಗಿ ಕಾಯ್ತಾ ಕುತಿರೋ, ಸ್ವಾರ್ಥಿ ಮಾನವ ನಿರ್ಮಿತ "ಹಚ್ಚ ಹಸಿರು ಹುಲ್ಲುಗಾವಲು". ಇದೇ ನಮ್ ಪರಪಂಚಾ ಅಂತಾ ಸ್ವಚ್ಚಂದವಾಗಿ ಓಡಾಡ್ತಾ ಮನುಷ್ಯನ ಮುಖ ಕಂಡ್ರೆ ಪಟ್ ಅಂಥಾ ಆಚೆ ಅವಿತು ಕೊಳ್ಳೋ ಹತ್ತಾರು ಮೊಲಗಳು.
ಹೌದು, ಇದಿಷ್ಟು ಸೀನು, ನಮ್ ಖಾಸಗಿ ಕಂಪನಿಯ ಆಫೀಸ್ ನದು. ಬಿಲವಾಸಿ ದಂಶಕ ಗಳೇ, ಇಲ್ಲಿ ಆಕರ್ಷಣೆಯ ಬಿಂದುಗಳು. ಬೆಳಿಗ್ಗೆ ಆಫೀಸ್ ಬಂದ್ ತಕ್ಷಣ ಇವಗಳ ದರ್ಶನ ತಗೊಂಡೇ ನಮ್ ಕ್ಯಾಬಿನ್ ಗಳಿಗೆ ಹೋಗ್ತಿವಿ , ಏನೋ ಒಂಥರಾ ಖುಷಿ ಆಗೋದು. ಆದ್ರೆ ಆ ಖುಷಿಗೆ ಯಾವ ನರಿ ಕಣ್ಣು ಬಿತ್ತೋ ಗೊತ್ತಿಲ್ಲಾ. ಇತ್ತೀಚಿಗೆ ಅಂದ್ರೆ ೧೫ ದಿನಗಳಿಂದ ಅವಗಳ ಆಕಾರಾನೆ ಬದಲಾಗಿ ಬಿಟ್ಟಿದೆ. ಮೈ ಮೇಲಿನ ಆ ಮೃದು ಚರ್ಮ ಎಲ್ಲಾ ಕಿತ್ತು ಹೋಗಿ, ಬರಿ ಗಂಟುಗಳಾಗಿ ಪರಿವರ್ತಿತ್ ವಾಗಿದ್ದು, ಇವೆಲ್ಲ ಮುದ್ದು ಮುಖದ ಕುಂದಿಲಿ ಗಳಾ??? ಅಂಥಾ ಪ್ರಶ್ನಿಸೋ ಮಟ್ಟಿಗೆ ಬೇಜಾರಾಗುತ್ತೆ ನೋಡಿ ......
ಎಲ್ಲಾ ಬಹು ಸುಶಿಕ್ಷಿತ (ಇಂಜಿನಿಯರ್ ,ಮ್ಯನೆಜೆರ್) ವ್ಯಕ್ತಿಗಳು ಇರೋ ಜಾಗ ಇದು, ಒಬ್ಬರಿಗೂ ಕೂಡ "ಏನಾಗಿದೆ ಇವುಗಳಿಗೆ ?" ಅಂಥಾ ೫ ನಿಮಿಷ ಯೋಚನೆ ಮಾಡೋ ಸೌಜನ್ಯತೆ ಇಲ್ಲ, ನನ್ನನ್ನು ಸೇರಿಸಿ.....ಕಾರಣ.... ಒತ್ತಡದ ಯಾಂತ್ರಿಕ ಜೀವನ/ ಪ್ರಾಣಿಗಳಲ್ಲಾ ಸತ್ತರೆನಂತೆ /ಇವಗಳ ಲೈಫ್ ಇಷ್ಟೇನೆ ...ಅನ್ನೋ ದ್ಯಾವುದೋ ಒಂದಾಗಿರುತ್ತೆ .
ಮನ ಬೇಸರಿಸಿ,ಅತೀ ಕುತೂಹಲದಿಂದ ಏನಾಗಿರಬಹುದು ?? ಅಂತಾ ಅಂತರ್ಜಾಲದಲ್ಲಿ ಜಾಲಾಡಿದಾಗ ಸಿಕ್ಕಮಾಹಿತಿ ಹೀಗಿತ್ತು ...ಈ ಸಾದು ಪ್ರಾಣಿಗಳಿಗೆ ಅಂಟಿಕೊಂಡಿರೋದು "ಮೈಕ್ಸೋಮೆಟಾಸಿಸ್" ಅನ್ನೋ ಖಾಯಿಲೆ.
ರೋಗದ ಹಿನ್ನೆಲೆ
ಮೈಕ್ಸೋಮೆಟಾಸಿಸ್ ಮೊದಲು ಪತ್ತೆಯಾಗಿದ್ದು ೧೮೯೬ ರ ದಕ್ಷಿಣ ಅಮೆರಿಕಗದ ಉರುಗ್ವೆನಲ್ಲಿ ."ಮೈಕ್ಸೋಮಾ" ಅನ್ನೋ ವೈರಸ್ ಕಾರಣ ಇದಕ್ಕೆ. ಕೊಂಚ ಹೆಚ್ಚಾಗಿ ಕಾಣ್ ಸಿಗೋ ಆಸ್ಟ್ರೇಲಿಯಾ ದ ೧೯೫೦ ರ ದಶಕದಲ್ಲಿ ೬ ಲಕ್ಷಗಳಿದ್ದ ಮೊಲಗಳ ಸಂಖ್ಯೆ ಬರೀ ಎರಡೇ ವರ್ಷಗಳಲ್ಲಿ ೧ ಲಕ್ಷಕ್ಕೆ ಇಳಿದು ಹೋಗಿತ್ತು . ಇದೇ ರೀತಿ ೧೯೫೪ ರ ಫ್ರಾನ್ಸ್ ನಲ್ಲಿ ೯೦% ಮೊಲಗಳು ಹಾಗೂ ಇಂಗ್ಲೆಂಡ್ ನಲ್ಲಿ ೯೫% ಮೊಲಗಳು ಸಾವನ್ನಪ್ಪಿದ್ದವು. ಈ ಸಂಖ್ಯಾ ಮಾಪನದಿಂದ ತಿಳಿದು ಬರೋದು ಇದು ಒಂದು ಅತೀ ವೇಗದ ಸಾಂಕ್ರಾಮಿಕ ರೋಗ ಅನ್ನೋದು.
ರೋಗದ ಲಕ್ಷಣ
ರೋಗದ ಮೂಲ ಕಾರಣವಾಗಿರೋ "ಮೈಕ್ಸೋಮಾ" ವೈರಸ್ ಬಹುಬೇಗ ಹರಡು ವಂತಹದಾಗಿದ್ದು, ಮೊದಲ ಹಂತದಲ್ಲಿ ಕಣ್ಣಿನ ಸುತ್ತಲೂ ಹಾಗೂ ತಲೆಯ ಮೇಲ್ಭಾಗದ ಚರ್ಮ ಕಿತ್ತು ಹೋಗಿ ಗಾಯದ ರೂಪದಲ್ಲಿ ಕಾಣುತ್ತೆ , ಕೆಲವೊಮ್ಮೆ ಅಂಧತ್ವ ,ಆಯಾಸ ಮತ್ತು ಜ್ವರಗಳು ಕೂಡ ಕಂಡು ಬರೋದು ಸಾಮಾನ್ಯ. ಉಲ್ಬಣಿಸಿದ ರೋಗದ ಎರಡನೇ ಹಂತದಲ್ಲಿ ಅವುಗಳ ಕರಳುಗಳು ಪೂರ್ತಿ ನಿಷ್ಕ್ರಿಯ ವಾಗಿ, ದಿನೇ ದಿನೇ ಆಹಾರದ ಪ್ರಮಾಣ ಕೂಡ ಕ್ಷೀಣಿಸಿ ,,೧೪ ರಿಂದ ೨೦ ದಿನಗಳಲ್ಲಿ ಸಾವನ್ನಪ್ಪುತ್ತವೆ....
ಚಿಕಿತ್ಸೆ
ಸರಿಯಾದ ರೀತಿನಲ್ಲಿ ಆಹಾರ, ನೀರು ಒದಗಿಸುವುದರಿಂದ ಈ ರೋಗ ಬರದಂತೆ ತಡೆಗಟ್ಟಬಹುದು. ಕೆಲವು ರೋಗ ನಿರೋಧಕ ಔಷಧಿಗಳಿಂದ ಸ್ವಲ್ಪ ದಿನ ಹೆಚ್ಚಿಗೆ ಬದುಕಿಸಬಹುದಾದರೂ ಪೂರ್ತಿಯಾಗಿ ಗುಣಪಡಿಸಲು ಚಿಕಿತ್ಸೆ ಲಭ್ಯ ಇಲ್ಲಾ ಅಂತಾ ಪ್ರಾಣಿ ವ್ಯದ್ಯರು ಹೇಳ್ತಾರೆ...ರೋಗದ ಮೊದಲ ಹಂತ ಕಾಣಿಸಿಕೊಂಡ ಮೊಲವನ್ನ ಗುರುತಿಸಿ, ತಕ್ಷಣ ಅವುಗಳ ಗುಂಪಿನಿಂದ ಬೇರ್ಪಡಿಸುವುದು ಅತೀ ಅವಶ್ಯಕ ಹಾಗೂ ರೋಗ ತಡೆಗಟ್ಟುವ ಸರಳ ಉಪಾಯ.
ಹ್ಮ್ಮ್... ಇಂತಹ ಅಲ್ಪ ಸ್ವಲ್ಪ ಮಾಹಿತಿ ಸಂಗ್ರಹಿಸಿ, ನಮ್ ಉದ್ಯಾನದ ಮೇಲುಸ್ತುವಾರಿ ವಹಿಸಿಕೊಂಡಂಥ ಒಬ್ಬ ೩ ನೆ ದರ್ಜೆಯ ನೌಕರನಿಗೆ ಸರಿಯಾಗಿ ತಿಳಿಸಿ ಹೇಳಿದೆ (ಅವುಗಳನ್ನ ಹ್ಯಾಗೆ ರೋಗಮುಕ್ತವಾಗಿಸಬಹುದು ಅಂಥಾ) ಆದ್ರೆ ಅವನಿಂದ ಬಂದಂಥ ಉತ್ತರ ಅನಿರೀಕ್ಷಿತ ವಾಗಿತ್ತು.
""ನೀವೇನ್ ಸರ್, ಇಷ್ಟಕ್ಕೆಲ್ಲಾ ಯಾಕೆ ತಲೆ ಕೆಡ್ಸಕೊತಿರಾ ? ೩ ರಿಂದ ೫ ರಿಯಾಲ್ (೩೦೦ ರಿಂದ ೫೦೦ ರೂಪಾಯಿಗಳು) ಕೊಟ್ಟ್ರೆ ಸೂಪರ್ ಮೊಲಗಳು ಸಿಗ್ತಾವೆ, ತಂದಿಟ್ಟರಾಯಿತು...ಬಹಳ ಅಂದ್ರೆ ೩ ವರ್ಷ ,೪ ವರ್ಷ ಬದುಕೋ ಈ ಮೊಲಗಳು ,ಗ್ರಹಚಾರ ಕೆಟ್ಟರೆ ಈ ಥರಾ ೪-೫ ತಿಂಗಳಲ್ಲಿ ಸಾಯ್ತಾವೆ ..ಅಸ್ಟೇ...ನೀವೇನು ಚಿಂತೆ ಮಾಡಬೇಡಿ, ಬಿಂದಾಸ್ ಆಗಿ ನಿದ್ದೆ ಮಾಡಿ ..ಓಕೆ ಬೈ ಸರ್ "" ಅಂತಾ ಹೋದಾ......ಇದನ್ನ ಇವನ ಹತ್ರ ಕೇಳೋಕೆ ನಾನಿಲ್ಲಿವರ್ಗೂ ಬರ್ಬೇಕಯ್ತಾ ?? ಅಂತಅನ್ಕೊಂಡ ಸುಮ್ನಾದೆ.
ಅಲ್ಲಾ....ಇವನ ಪ್ರಕಾರ , ಪ್ರಾಣಿಗಳ ಹೃದಯ ಬಡಿತಕ್ಕೂ ...ಕೀಲಿ ಕೊಟ್ಟು ಆಟಾ ಆಡಿಸೋ ಆಟಿಕೆ ಗೂ ವ್ಯತ್ಯಾಸನೆ ಇಲ್ವಾ......????
ಚಿತ್ರ ಕೃಪೆ : ನನ್ನ ನೋಕಿಯಾ ..