ಮೈಸೂರಿನ ಕುಕ್ಕರಳ್ಳಿ ಕೆರೆ

ಮೈಸೂರಿನ ಕುಕ್ಕರಳ್ಳಿ ಕೆರೆ

ಆನಂದಮಯ ಈ ಕುಕ್ಕರಳ್ಳಿ ಕೆರೆ ಹೃದಯವು. ಕುವೆಂಪು ಮನದಲ್ಲಿ ಕವನಗಳ ಅಲೆಯೆಬ್ಬಿಸಿದ ಕೆರೆ, ಅಷ್ಟೇ ಏಕೆ, ಪುಸ್ತಕ 'ಪ್ರೇಮಿಗಳು' ಸುಳಿದಾಡುವ ತಾಣವೂ, ಮೈಸೂರಿಗೆ ಬರುವ ಪ್ರವಾಸಿಗರು ನೋಡಲೇ ಬೇಕೆಂಬ ಮಹದಾಸೆ ತರುವ ಕೆರೆಯಿದು. ರಾಷ್ಟ್ರಕವಿ ಕುವೆಂಪು ಅವರಿಗೆ ಮೈಸೂರಲ್ಲಿ ಅಚ್ಚು ಮೆಚ್ಚಿನ ತಾಣಗಳೆಂದರೆ ಕುಕ್ಕರಹಳ್ಳಿ ಕೆರೆ ಹಗೂ ಮೈಸೂರು ವಿವಿಯ ಮಾನಸ ಗಂಗೋತ್ರಿ ಆವರಣ. 

ಕವಿ ಮನಸ್ಸಿನ ಕುವೆಂಪು ಇಲ್ಲಿನ ಪರಿಸರವನ್ನೂ, ತಣ್ಣನೆಯ ಗಾಳಿಯನ್ನೂ ಸವಿಯುತ್ತ ಭಾವಪರವಶರಾಗಿ ರಚಿಸಿದ ನೂರಾರು ಕವಿತೆಗಳು ಇಂದು ಜನಮಾನಸದಲ್ಲಿ ಸೇರಿವೆ. ಕುಕ್ಕರಹಳ್ಳಿ ಕೆರೆ ಕುವೆಂಪು ಸಾಹಿತ್ಯದಲ್ಲಿ ಕುಕ್ಕನಹಳ್ಳಿ ಕೆರೆಯಾಗಿಯೂ ಕರೆಸಿಕೊಂಡಿವೆ. ಮೈಸೂರಿನ ಕುಕ್ಕರಹಳ್ಳಿ ಕೆರೆ ಮೈಸೂರಿಗೇ ಏನು, ಕುವೆಂಪು ಅವರ ಮೂಲಕ ವಿಶ್ವವಿಖ್ಯಾತಿ ಪಡೆದಿರುವ ಜಾಗ, ಇಂದಿನ ಮೈಸೂರು ವಿವಿ ಆವರಣದ 150 ಎಕರೆ ಜಾಗದಲ್ಲಿ ಹರಡಿರುವ ಈ ಕೆರೆ ಮೈಸೂರಿಗೆ ಪರಿಸರ ಮುಕುಟದಂತಿರುವ ಅದ್ಭುತ ತಾಣ. ಈ ಕೆರೆಗೂ ಕುವೆಂಪು ಅವರಿಗೂ ಇದ್ದದ್ದು ತಾಯಿ - ಮಗನ ಅದ್ಭುತ ಸಂಬಂಧ.

ಕುವೆಂಪು ಅವರು 1958ರಲ್ಲಿ ಮೈಸೂರು ವಿವಿಯ ಕುಲಪತಿಯಾಗಿದ್ದಾಗ ದೂರದೃಷ್ಟಿಯಿಂದ ಮೈಸೂರು ವಿವಿಗೆ ಮಹಾರಾಜರ ಅಧೀನದಲ್ಲಿದ್ದ ಇಂದಿನ 739 ಎಕರೆಯ ಜಾಗದಲ್ಲಿ ಮಾನಸ ಗಂಗೋತ್ರಿ ನಿರ್ಮಿಸಿದರು. 150 ಎಕರೆ ಜಾಗದಲ್ಲಿದ್ದ ಕುಕ್ಕರಹಳ್ಳಿ ಕೆರೆಯನ್ನು ವಿವಿ ಅಧೀನಕ್ಕೆ ತೆಗೆದುಕೊಂಡರು.

ವಸ್ಥೆ ಸೇತುವೆ ಬಳಿ ಕಾವೇರಿ ಎರಡು ಕವಲುಗಳಾಗಿ ಸೀಳಿಕೊಂಡು ಮಂಡ್ಯ ಮತ್ತು ಚಾಮರಾಜನರ ಜಿಲ್ಲೆಗಳನ್ನು ಪ್ರತ್ಯೇಕಿಸುತ್ತಾಳೆ. ಒಂದು ಸೀಳು ಮಂಡ್ಯದ ಬ್ಲಫ್, ಗಗನಚುಕ್ಕಿಯಾದರೆ ಇನ್ನೊಂದು ಭರಚುಕ್ಕಿಯನ್ನು ನಿರ್ಮಿಸಿದೆ. ಇದು ವ್ಯಾಪ್ತಿಗೆ ಸೇರಿದ ಸ್ಥಳ. ಕಾವೇರಿ ಭರಚುಕ್ಕಿಯಲ್ಲಿ ಮೂರು ಭಾಗದಲ್ಲಿ ಇಳಿಯುತ್ತಾಳೆ. ಇಲ್ಲಿಗೆ ಎರಡು ಕಿ.ಮೀ. ಹಿಂದೆಯೇ ಸಿಗುವ ಗಗನಚುಕ್ಕಿ ಜಲಪಾತದ ದಕ್ಷಿಣ ದಂಡೆ ಇದೆ. ಇಲ್ಲಿಂದಲೂ ಜಲಧಾರೆ ಕಣ್ಮನ ಸೆಳೆಯುತ್ತದೆ. ಇದರ ಪಕ್ಕದಲ್ಲಿ ದರ್ಗಾ ಇದೆ.

ಇದಕ್ಕೂ ಹಿಂದೆ ಅಂದರೆ ಶಿವನಸಮುದ್ರದ ಆರಂಭದಲ್ಲಿ ಮಧ್ಯರಂಗವಿದೆ. ಪಕ್ಕದಲ್ಲೇ ಪುರಾತನ ಸೋಮೇಶ್ವರ ಗುಡಿ, ಅದಕ್ಕೆ ಸಮೀಪದಲ್ಲಿ ಊರಿನ ಮಾರಮ್ಮನ ದೇವಾಲಯವಿದೆ. ಇದನ್ನು ಶಿಂಷಾ ಮಾರಮ್ಮ ಎಂದೂ ಕರೆಯುತ್ತಾರೆ. ಹೀಗಾಗಿ ಇದು ದೇಗುಲಗಳ ದ್ವೀಪವೂ ಆಗಿದೆ. ಈ ರಂಗನಾಥಸ್ವಾಮಿ ದೇವಳ ಹೊಯ್ಸಳರ ಕಾಲದ್ದು. ಎರಡೂವರೆ ಮೀಟ‌ರ್ ಕಪ್ಪುಶಿಲೆಯ ಶಾಂತಮೂರ್ತಿ ರಂಗನಾಥ ಕಾಲುಚಾಚಿ ಮಲಗಿದ್ದಾನೆ. ಈ ಕಾವೇರಿ ತಾನು ಹರಿಯುವ ಸ್ಥಳದಲ್ಲಿ ಮೂರು ಊರುಗಳನ್ನು ದ್ವೀಪವನ್ನಾಗಿ ಮಾಡಿದ್ದಾಳೆ. ಇಲ್ಲಿ ರಂಗನಾಥ ನೆಲೆಸಿದ್ದಾನೆ. ಆದಿರಂಗ ಶ್ರೀರಂಗಪಟ್ಟಣದಲ್ಲಿದ್ದರೆ, ಮಧ್ಯರಂಗ ಶಿವನಸಮುದ್ರದಲ್ಲಿ, ಅಂತ್ಯರಂಗ ತಮಿಳುನಾಡಿನ ಶ್ರೀರಂಗದಲ್ಲಿ ಮಲಗಿದ್ದಾನೆ. ಈ ಮೂರು ರಂಗನಾಥನ ದರ್ಶನವನ್ನು ಒಂದೇ ದಿನ ಮಾಡಿದರೆ ಅಧಿಕ ಪುಣ್ಯಫಲ ಪ್ರಾಪ್ತಿ ಇದೆ ಎಂಬ ನಂಬಿಕೆ ಇದೆ.

"ಆನಂದಮಯ ಈ ಕುಕ್ಕರಳ್ಳಿ ಕೆರೆ ಹೃದಯವು. ಕುವೆಂಪು ಮನದಲ್ಲಿ ಕವನಗಳ ಅಲೆಯೆಬ್ಬಿಸಿದ ಕೆರೆ, ಅಷ್ಟೇ ಏಕೆ, ಪುಸ್ತಕ 'ಪ್ರೇಮಿಗಳು' ಸುಳಿದಾಡುವ ತಾಣವೂ, ಮೈಸೂರಿಗೆ ಬರುವ ಪ್ರವಾಸಿಗರು ನೋಡಲೇ ಬೇಕೆಂಬ ಮಹದಾಸೆ ತರುವ ಕೆರೆಯಿದು. ರಾಷ್ಟ್ರಕವಿ ಕುವೆಂಪು ಅವರಿಗೆ ಮೈಸೂರಲ್ಲಿ ಅಚ್ಚು ಮೆಚ್ಚಿನ ತಾಣ" ಕುಕ್ಕರಹಳ್ಳಿ ಕೆರೆಗೆ ಬನ್ನಿ ಒಮ್ಮೆ ಪ್ರವಾಸಕ್ಕೆ... 

(ಚಿತ್ರಗಳು : ಅಂತರ್ಜಾಲ ಕೃಪೆ)

-ರಮೇಶ ನಾಯ್ಕ, ಉಪ್ಪುಂದ, ಬೈಂದೂರು