ಮೈಸೂರು ಅಸೋಸಿಯೇಷನ್ ನ ತಿಂಗಳೋಲೆ ಓದಿದಿರಾ ?
ಇಲ್ಲವೆ. ಹಾಗಾದರೆ ಈಗ ಓದಬಹುದು. ಈಗ ಅದರಲ್ಲೇನಿದೆ ಅಂತೀರಾ. ಹೌದು ಅದನ್ನೇ ಹೇಳಕ್ಕೆ ಹೊರಟಿದ್ದೆ. ಅದರ ಹೆಸರು, 'ನೇಸರು' ಎಂದು. ನಿಮಗೆ ಗೊತ್ತಿರಬಹುದು, '೨೦೦೯ ರ ಫಾಲ್ಕೆ ಪ್ರಶಸ್ತಿ' ನಮ್ಮ ಮೈಸೂರಿನ ಹೆಸರುವಾಸಿಯಾಗಿದ್ದ 'ಕ್ಯಾಮರಾಮನ್, ಶ್ರೀ. ವಿ. ಕೆ. ಮೂರ್ತಿ 'ಯವರಿಗೆ ದೊರೆತಿದೆ ಅನ್ನೋ ವಿಚಾರ ! ಈ ನೇಸರು ಪತ್ರಿಕೆಯ ವಿಶೇಷ ಸಂಚಿಕೆಯಲ್ಲೇ ಅವರ ಬಗ್ಗೆ ಎಲ್ಲಾ ಹೆಚ್ಚಿನ ವಿಚಾರಗಳೂ ದೊರೆಯುತ್ತವೆ.
ಬಾಲಿವುಡ್ ನಲ್ಲಿ ಕಪ್ಪು-ಬೆಳಕಿನ ಚಿತ್ರಗಳ ಸಮಯದಲ್ಲೂ ಯಾವ ಆಧುನಿಕ ಕ್ಯಾಮರಗಳ ಸೌಲಬ್ಯವಿಲ್ಲದೆಯೂ ಆ ದಾರಿಯಲ್ಲೇ ತಮ್ಮ ಕೌಶಲಗಳನ್ನು ಜಮಾಯಿಸಿ, ತಮ್ಮ ಧರ್ಯ, ಮತ್ತು ನಿಷ್ಠೆಯಿಂದ ದುಡಿದು, ಹೆಸರುಮಾಡಿ, ಇಂದಿನ ಯುವಪೀಳೆಗೆಗೆ ಮಾದರಿಯಾಗಿರುವ ಶ್ರೀ ಮೂರ್ತಿಯವರು ಬೊಂಬಾಯಿಗೆ ಬಂದಾಗ, ಹಿಂದೀ ಭಾಷೆಯೂ ಬರದ, ವ್ಯಕ್ತಿಯಾಗಿದ್ದರು.
ತಾವು ಹಿಡಿದ ದಾರಿಯಲ್ಲಿ ನಂಬಿಕೆ ಇಟ್ಟುಕೊಂಡು ಮಾಡಿದ ಕೃಷಿಗೆ ಪ್ರತಿಫಲ ಇಲ್ಲದೆಯೇ ಹೋಗುತ್ತಯೇ ? ಸಾಧ್ಯವೇ ಇಲ್ಲ. ಸಿನಿಮಾ ಕ್ಷೇತ್ರದಲ್ಲಿ ನಟರು, ದಿಗ್ದರ್ಶಕರು, ಸಂಗೀತಕಾರರು ಇಂಥವರೇ ಹಾಸಲುಮಾಡುತ್ತಿದ್ದ ಜಾಡಿನಲ್ಲಿ ಒಂದು ಹೊಸ ಮನೋಧರ್ಮವನ್ನು ಹುಟ್ಟಿಹಾಕಿದ ಸ್ತೈರ್ಯ ಮೂರ್ತಿಯವರಿಗೆ ಸಲ್ಲಬೇಕು.
ಶ್ರೀ ಮೂರ್ತಿಯವರು ಚಿತ್ರೀಕರಣಮಾಡಿದ ಹಲವಾರು ಹಿಂದೀ ಚಿತ್ರಗಳು ಫಿಲ್ಮ್ ಫೇರ್ ಪ್ರಶಸ್ತಿ ಕಂಡಿವೆ. ಇದಲ್ಲದೇ ಸ್ವತಃ ವಿ. ಕೆ. ಮೂರ್ತಿಯವರೇ 'ಎರಡು ಫಿಲ್ಮ್ ಫೇರ್ ಪ್ರಶಸ್ತಿ 'ಗಳನ್ನು ತಮ್ಮ ಜೋಳಿಗೆಗೆ ಹಾಕಿಕೊಂಡಿದ್ದಾರೆ. ಇವುಗಳ ಬಗ್ಗೆ ಅವರ ಆತ್ಮ ಕಥೆ,' ಬಿಸಿಲು ಕೋಲು ' ಎನ್ನುವ ಪುಸ್ತಕದ ಬಗ್ಗೆಯೂ ಬೆಳಕು ಚೆಲ್ಲಲಾಗಿದೆ.
ಬನ್ನಿ ; ಮೈಸೂರ್ ಅಸೋಸಿಯೇಷನ್ ಗೆ. ಅಲ್ಲಿ ನಿಮಗೆ ನೇಸರು ವಿಶೇಶಾಂಕದ ಪ್ರತಿಗಳು ಉಳಿದಿದ್ದರೆ ಸಿಗಬಹುದು !
ಮೈಸೂರ್ ಅಸೋಸಿಯೇಷನ್ ನ ಸದಸ್ಯರಿಗೆ ಮಾತ್ರ ಲಭ್ಯವಾಗುವ ಈ ಪತ್ರಿಕೆಯನ್ನು ನೀವು ಅಲ್ಲಿಯೇ ಕುಳಿತು ಓದಬಹುದು. 'ಶ್ರೀಮತಿ ಮಾಲತಿ ರಾವ್,' ಮೂರ್ತಿಯವರ ಬಗ್ಗೆ ಬರೆದ,' ಬಿಸಿಲುಕೋಲು ಪುಸ್ತಕ ' ವನ್ನು ಅಲ್ಲಿ ಖರೀದಿಸಲೂ ಬಹುದು.
ಏನಂತೀರ ?
-ಮೈಸೂರ್ ಅಸೋಸಿಯೇಷನ್ ಸೌಜನ್ಯದಿಂದ.
ಮೈಸೂರ್ ಅಸೋಸಿಯೇಷನ್, ಭಾವುದಾಜಿ ರಸ್ತೆ,
ಮಾಟುಂಗ, (ಪೂರ್ವ), ಮುಂಬೈ-೪೦೦೦೧೯
ದೂರವಾಣಿ ಕ್ರಮಾಂಕ : ೨೪೦೨ ೪೬೪೭/೨೪೦೩ ೭೦೬೫