ಮೈಸೂರು ವಿಶ್ವವಿದ್ಯಾನಿಲಯದ ಕನ್ನಡ ಗ್ರಂಥಗಳು ಎಲ್ಲರಿಗೂ ಸುಲಭವಾಗಿ ದೊರೆಯುವಂತಾಗಲಿ
ಗೆಳೆಯರೇ,
"ನ ಹಿ ಜ್ಞಾನೇನ ಸದೃಶಮ್' ಎನ್ನುವ ಧ್ಯೇಯ ವಾಕ್ಯ ಹೊಂದಿರುವ ಮೈಸೂರು ವಿಶ್ವವಿದ್ಯಾನಿಲಯವು, ಹಲವಾರು ಅಪರೂಪದ ಪ್ರಕಟಣೆಗಳನ್ನು ಮಾಡಿದೆ. ಕನ್ನಡದ ಪಠ್ಯಪುಸ್ತಕಗಳು, ಕನ್ನಡ ವಿಶ್ವಕೋಶ, ಇಂಗ್ಲಿಷ್-ಕನ್ನಡ ನಿಘಂಟು, ವಿಷಯ ವಿಶ್ವಕೋಶಗಳು ಹೀಗೆ ಮೈಸೂರು ವಿಶ್ವವಿದ್ಯಾನಿಲಯದ ಪ್ರಕಟಣೆಗಳಲ್ಲಿ ಹಲವಾರು ಅನರ್ಘ್ಯ ರತ್ನಗಳೇ ಅಡಗಿವೆ. ಇವುಗಳಲ್ಲಿ ಹಲವು ವಿದ್ವತ್ತುಂಗಗಳಾದರೆ ಕೆಲವು ರಸಪೂರ್ಣ ಗ್ರಂಥಗಳು. ಅವುಗಳು ತಮ್ಮ ಜ್ಞಾನ ಪ್ರವೃತ್ತಿಯಿಂದ ಅಮರವಾದರೂ ನಶ್ವರ ಕಾಗದದ ಮೇಲೆ ಮುದ್ರಿತಗೊಂಡು ಕಾಲನ ಹೊಡೆತಕ್ಕೆ ಸಿಲುಕಿ, ನಲುಗಿ, ಯಾರಿಗೂ ಲಭ್ಯವಿಲ್ಲದೆ ಹೋಗುವ ಸಾಧ್ಯತೆಗಳಿವೆ.
ಹಾಗಾಗಿ ಅವನ್ನು ಡಿಜಿಟಲ್ ರೂಪದಲ್ಲಿ ಸಂಗ್ರಹಿಸಿ, ಮುಕ್ತವಾಗಿ ಹಂಚಿಕೊಂಡರೆ, ವಿಶ್ವವಿದ್ಯಾನಿಲಯದ ಜ್ಞಾನಪ್ರಸಾರದ ಉದ್ದೇಶವೂ ಈಡೇರುತ್ತದೆ, ರಸಿಕರಿಗೆ ರಸದೂಟವೂ ಸಿಗುತ್ತದೆಯಲ್ಲವೇ?
ಅದಕ್ಕಾಗಿಯೇ, ಹಲವು ಸಮಮನಸ್ಕರು ವಿಶ್ವವಿದ್ಯಾನಿಲಕ್ಕೊಂದು ಅಪೀಲು ಸಲ್ಲಿಸಲು ಯೋಚಿಸಿ, ಇದರ ಪ್ರತಿಯನ್ನು ಇಲ್ಲಿಟ್ಟಿದ್ದಾರೆ. ಇದನ್ನು ಡೌನ್ ಲೋಡ್ ಮಾಡಿಕೊಂಡು ನಿಮ್ಮ, ನಿಮ್ಮ ಸ್ನೇಹಿತರ, ಸಹಮನಸ್ಕರ ಸಹಿಯೊಂದಿಗೆ, ವಿಶ್ವವಿದ್ಯಾನಿಲಯಕ್ಕೆ ಫ್ಯಾಕ್ಸ್/ ಅಂಚೆ / ಕೊರಿಯರ್/ಇಮೇಲ್ ಮುಖಾಂತರ ತಲುಪಿಸಿದರೆ ಇದೊಂದು ಸಮಷ್ಠಿ ದನಿಯಾಗಬಹುದು. ಈ ಕಾರ್ಯದಲ್ಲಿನ ಯಶಸ್ಸು ಕಂಪ್ಯೂಟರಿನಲ್ಲಿ ಕನ್ನಡದ ಅಳವಡಿಕೆಗೆ ಸಹಕಾರಿಯಾಗಬಹುದು. ಕನ್ನಡದ ಕಹಳೆ ಮೊಳಗಬಹುದು. ಕನ್ನಡ ವಿದ್ವತ್ತಿನ ಹಿರಿಮೆ ಬೆಳಗಬಹುದು. ವಿಶ್ವವಿದ್ಯಾನಿಲಯದ ಗ್ರಂಥಗಳು ಸುಲಭವಾಗಿ ಎಲ್ಲರ ಮನೆ ಮನ ತಲುಪಬಹುದು.
ಅಹುದೆನ್ನಿಸಿದರೆ ಈಗಲೇ ಕಾರ್ಯಪ್ರವೃತ್ತರಾಗಿ. ಈ ಕಾರ್ಯದಲ್ಲಿ ನೀವು ಸಹಾಯಮಾಡಬಲ್ಲಿರಾದರೆ, ಈ ಅಪೀಲಿಗೆ ಸಹಿ ಮಾಡಿ ಕುಲಪತಿಗಳಿಗೆ ನೇರ ಫ್ಯಾಕ್ಸ್ ಮಾಡಿ ಈ ಯಜ್ಞದಲ್ಲಿ ಭಾಗಿಗಳಾಗಿ.
ಪೆಟಿಶನ್ ಡೌನ್ಲೋಡ್ ಮಾಡಲು ಕ್ಲಿಕ್ಕಿಸಿ: [:http://hpnadig.net/pet-kn-nvol.pdf|ಪೆಟಿಶನ್ನಿನ ಕನ್ನಡ ಆವೃತ್ತಿ] | [:http://hpnadig.net/pet-en-nvol.pdf|ಪೆಟಿಶನ್ನಿನ ಇಂಗ್ಲಿಷ್ ಆವೃತ್ತಿ]
(ಕೆಳಗಿನ ಆವೃತ್ತಿ ಡಿಜಿಟೈಸ್ ಮಾಡುವಲ್ಲಿ ಸಹಾಯ ಮಾಡಬಯಸುವ, ಪಾಲ್ಗೊಳ್ಳಬಯಸುವವರಿಗೆ)
[:http://hpnadig.net/pet-kn-vol.pdf|ಪೆಟಿಶನ್ನಿನ ಕನ್ನಡ ಆವೃತ್ತಿ] | [:http://hpnadig.net/pet-en-vol.pdf|ಪೆಟಿಶನ್ನಿನ ಇಂಗ್ಲಿಷ್ ಆವೃತ್ತಿ]
ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿಯವರ ಫ್ಯಾಕ್ಸ್ ನಂಬರು: +91-821-2419363
ಕುಲಪತಿಯವರ ಇ-ಮೇಯ್ಲ್ ವಿಳಾಸ (vc@uni-mysore.ac.in)