ಮೊಟ್ಟೆಯ ದೋಸೆ

ಮೊಟ್ಟೆಯ ದೋಸೆ

ಬೇಕಿರುವ ಸಾಮಗ್ರಿ

ಗೋಧಿ ಹಿಟ್ಟು ೧ ಕಪ್, ಮೊಟ್ಟೆ ೨, ಈರುಳ್ಳಿ  ೧, ಕಾಯಿ ಮೆಣಸು ೨-೩, ರುಚಿಗೆ ಉಪ್ಪು, ಸ್ವಲ್ಪ ಎಣ್ಣೆ, ಬೇವಿನ ಸೊಪ್ಪು, ಕೊತ್ತಂಬರಿ ಸೊಪ್ಪು

 

ತಯಾರಿಸುವ ವಿಧಾನ

ಈರುಳ್ಳಿ ಮತ್ತು ಕಾಯಿಮೆಣಸನ್ನು ಸಣ್ಣಗೆ ತುಂಡರಿಸಿಕೊಳ್ಳಿ. ಗೋಧಿ ಹಿಟ್ಟಿಗೆ ಮೊಟ್ಟೆಯನ್ನು ಒಡೆದು ಹಾಕಿ ಅದರಲ್ಲೇ ಹಿಟ್ಟನ್ನು ಕಲಸಿ. ತುಂಬಾ ದಪ್ಪವಾಗದಂತೆ ಸ್ವಲ್ಪ ನೀರನ್ನು ಹಾಕ ಬಹುದು. ದೋಸೆ ಹಿಟ್ಟಿನಷ್ಟು ಹದಕ್ಕೆ ಬಂದ ಬಳಿಕ ಸಣ್ಣದಾಗಿ ಕತ್ತರಿಸಿದ ಈರುಳ್ಳಿ, ಕಾಯಿಮೆಣಸು, ಬೇವು ಮತ್ತು ಕೊತ್ತಂಬರಿ ಸೊಪ್ಪು, ರುಚಿಗೆ ಬೇಕಾದಷ್ಟು ಉಪ್ಪನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ನಂತರ ಒಂದು ಕಾವಲಿಯನ್ನು ಒಲೆಯ ಮೇಲಿಟ್ಟು ಸ್ವಲ್ಪ ಎಣ್ಣೆ ಹಾಕಿ ದೋಸೆ ಹೊಯ್ದಂತೆ ಹೊಯ್ಯಿರಿ. ಬಿಸಿಯಿರುವಾಗಲೇ ಈ ರುಚಿಕರ ದೋಸೆ ತಿನ್ನಿರಿ.