ಮೊಟ್ಟೆ ಬೋಂಡಾ
ಬೇಕಿರುವ ಸಾಮಗ್ರಿ
4 ಬೇಯಿಸಿದ ಮೊಟ್ಟೆ, ಬೇಯಿಸಿದ ಅಲೂಗಡ್ಡೆ, ಹಸಿಮೆಣಸು, ಕೊತ್ತಂಬರಿ ಸೊಪ್ಪು, ಎರಡು ಚಮಚ ಕಾರ್ನ್ ಫ್ಲೋರ್ ಪೌಡರ್, ಕರಿಯಲು ಎಣ್ಣೆ, ರುಚಿಗೆ ತಕ್ಕಷ್ಟು ಉಪ್ಪು
ತಯಾರಿಸುವ ವಿಧಾನ
ಬೇಯಿಸಿದ ಅಲೂಗಡ್ಡೆಗೆ ಹಸಿಮೆಣಸು, ಕೊತ್ತಂಬರಿ ಸೊಪ್ಪು, ಎರಡು ಚಮಚ ಕಾರ್ನ್ ಫ್ಲೋರ್ ಪೌಡರ್, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಸ್ಮಾಷ್ ಮಾಡಿಕೊಳ್ಳಬೇಕು. ಬೇಯಿಸಿದ ಮೊಟ್ಟೆಯನ್ನು ಎರಡು ಭಾಗ ಮಾಡಿ ಕತ್ತರಿಸಿ ಒಂದು ಭಾಗಕ್ಕೆ ಸ್ಮಾಷ್ ಮಾಡಿದ ಅಲೂಗಡ್ಡೆಯನ್ನು ಹಚ್ಚಿ. ಕಡಿಮೆ ಉರಿಯಲ್ಲಿ ಎಣ್ಣೆಯನ್ನು ಇಟ್ಟು ಫ್ರೈ ಮಾಡಬೇಕು. ಬಿಸಿ ಬಿಸಿ ಬೋಂಡಾ ರೆಡಿ. ಮೊಟ್ಟೆ ನಾಲಿಗೆಗೆ ಎಷ್ಟು ರುಚಿಯೋ ಆರೋಗ್ಯಕ್ಕೂ ಅಷ್ಟೇ ಹಿತಕರ.