ಮೊದಲೆನಿಸಿದವರು..ಮೊದಲೆಣಿಸಿದವರು..?

ಮೊದಲೆನಿಸಿದವರು..ಮೊದಲೆಣಿಸಿದವರು..?

ಕವನ
 "ಮೊದಲೆನಿಸಿದವರು ಈಗ ಅನಿಸುವದಿಲ್ಲ
  ಮೊದಲೆಣಿಸಿದವರು ಈಗ ಎಣಿಸುವದಿಲ್ಲ
  ನಮ್ಮೊಳಗೆ ನಾವೇ ಎಲ್ಲಾ
  ಈ ಜೀವನದಲ್ಲಿ ಜೀವವೇ ಇಲ್ಲ..,
 
  ಕನಸುಗಳ ಕಟ್ಟಿಗೆ ಕಡಿಯುತ್ತಾ
  ಬದುಕೆಂಬ ಮನೆ ಕಟ್ಟುತ್ತಾ .,
  ಮನಸುಗಳ ನಡುವೆ ಬೇಲಿ ಹಾಕುತ್ತಾ
  ಮರೆತಿರುವೆವು ಮಾನವೀಯತೆಯ ಮರ ಬೆಳೆಸುವುದನ್ನಾ..?