ಮೊದಲ ದೀಪಾವಳಿ

ಮೊದಲ ದೀಪಾವಳಿ

ಕವನ

ವರುಷಗಳಿಂದ ದೀಪಾವಳಿಯ ಆಚರಿಸುತ್ತಿದ್ದರೂ

ವಿಶೇಷವಾಗಿದೆ ಈ ಬಾರಿಯ ದೀಪಾವಳಿ

ಬಾಳಿನಲ್ಲಿ ಹೊಸ ಹೆಜ್ಜೆ ಇಟ್ಟ ಈ ವರುಷದಿ

ಮಡದಿಯೊಡನೆ ಆಚರಿಸಲು ಹೊರಟಿದ್ದೇನೆ ದೀಪಾವಳಿಯ...



ಮದುವೆಯ ನಂತರದ ಮೊದಲ ದೀಪಾವಳಿ

ಆಚರಿಸಲು ಬಂದಿದೆ ಬುಲಾವ್ ಅತ್ತೆಯ ಮನೆಯಿಂದ

ಹೊಸ ಅನುಭವಗಳು ಹೊಸ ಸಂಭ್ರಮದಿಂದ

ಆಚರಿಸಲು ಸಿದ್ಧವಾಗಿಹೆವು ದೀಪಾವಳಿಯ



ವಾರದಿಂದ ಮನಸು ಗೊಂದಲದಲ್ಲಿದ್ದರೂ

ಎಲ್ಲವ ಮರೆತು ಬೆಳಕ ಚೆಲ್ಲುವ

ದೀಪಾವಳಿಯ ಆಚರಿಸಲು ಹೊರಟಿರುವೆನು

ಅತ್ತೆಯ ಮನೆಗೆ....

Comments