ಮೊದಲ ನೋಟ ----ಗೂಗ್ಲಿ
ಕವನ
ಮದುವೆಯ ಆಮಂತ್ರಣ ನೀಡಲು ಬಂದವಳು
ನಿನ್ನ ಕಂಡ ಮೊದಲ ಸಲವೇ ಸೋತೆ ನಾನು
ಮೌನದಲ್ಲಿ ಮಾತನಾಡದೆ ನಕ್ಕೆ ನೀನು
ನಿನ್ನ ಕೈಯಲ್ಲಿ ಪತ್ರವ ಕಂಡು ಕನಸುಗಳ ಗೋಪುರ ಕಟ್ಟಿದೆ ನಾನು
ಆದರೆ ಮದುವೆಯ ಆಮಂತ್ರಣ ಪತ್ರಿಕೆ ಕೊಟ್ಟು ಕಿವಿಗೆ ಹೂವಿಟ್ಟೆ ನೀನು ||
ನದಿಯೊಂದಿಗೆ ಬಂದ ಜಲಪಾತ
ನಾನಂದುಕೊಂಡೆ ನೀ ನದಿಯಂತೆ ಹರಿದು ಬಂದು ನನ್ನ ಸೇರುವೆ
ನಿನಗಾಗಿಯೇ ಸಾಗರದಂತೆ ನಾ ಕಾದು ನಿಂತು ನೋಡಿದೆ
ನಿನ್ನೊಡನೆ ಜಲಪಾತದಂತೆ ದುಮ್ಮಿಕುತ್ತ ಬಂದ ವ್ಯಕ್ತಿಯ ಕಂಡು ನಾ ಬೆಚ್ಚಿದೆ
ಆ ವ್ಯಕ್ತಿ ನಿನ್ನ ಬಾವಿ ಪತಿಯೆಂದು ತಿಳಿದು ಹುಚ್ಚು ಹೆಚ್ಚಾಗಿದೆ ||
ನಾನದೆ ಮುರಾರಿ, ಆದರೆ ಅವಳು ಪರಾರಿ
ಬಿ.ಎಂ.ಟಿ.ಸಿ ಬಸ್ಸಿನೋಳ್ಳಗೆ ನಡೆದು ಬಂದಳು ೨೦೧೨ ರ ನಾರಿ
ನನ್ನ ಸೀಟಿನ ಹತ್ತಿರ ಬಂದು ಕೇಳಿದಳು "ರೀ ಸ್ವಲ್ಪ ಸರಿರೀ"
ಪಕ್ಕದಲ್ಲಿ ಕುಳಿತಾಗ ನಾನಂದು ಕೊಂಡೆ ಇವಳಿಗೆ ನಾನೇ ಮುರಾರಿ
ಮುಂದಿನ ಸ್ಟಾಪ್ನಲ್ಲಿ ಕೆಳಗಿಳಿದು ನಡೆದಳು ಹೃದಯ ಕದ್ದ ಚೋರಿ
ಆಗಲೇ ನನಗೆ ತಿಳಿದದ್ದು ಅವಳು ನನ್ನ ಪರ್ಸಿನೊಡನೆ ಪರಾರಿ ||