ಮೊದಲ ಮಳೆ
ಬರಹ
ಮೊದಲ ಮಳೆಯ
ಮೋಡಿಗೆ ಮನಸೋತು
ನಾ ಹೆಜ್ಜೆಯಿಟ್ಟೆ
ಹೊರಗೆ
ನೋಡಿದ ಅಮ್ಮ
ಸಿಡಿಲು ಗುಡುಗಿನ ಆರ್ಭಟಕ್ಕೆ ಹೆದರಿ
ಕರೆಯುತ್ತಿದ್ದಳು
ಒಳಗೆ
ಇದಾವುದನ್ನೂ ಲೆಕ್ಕಿಸದೆ
ಮೈಯೊಡ್ಡಿದೆ
ತುಂತುರು
ಮಳೆಗೆ
ಒಂದೊಂದೇ ಹನಿಯು
ಮುಖವನ್ನು ಚುಂಬಿಸಿ
ಮರೆಯಾದ ಅನುಭವ
ನನ್ನೊಳಗೆ
ಮಳೆ ನಿಂತಾಗ
ಮುಗಿಲನ್ನು ಮುಟ್ಟಿದ
ಸಂಭ್ರಮ
ಮೈಮನದೊಳಗೆ