ಮೊದಲ ಮಾತು

ಮೊದಲ ಮಾತು

ಮೊದಲ ಮಾತು ಅನ್ನೋದು ಎಂದಾದರೂ, ಯಾರಿಗಾದರೂ ತುಂಬಾ ವಿಶೇಷವೆ. ಇಂಟರ್ನೆಟ್ ಮಾಯಾಲೋಕದ ಹಾದಿ - ಬೀದಿಗಳಾದ ವಿವಿಧ ಬ್ಲಾಗುಗಳಲ್ಲಿ, ಹಾಳೆಗಳಲ್ಲಿ,ನಾನು ಕೆಲಸ ಮಾಡೋ ಕಂಪನಿ ವೆಬ್ಸೈಟ್ಗಳಲ್ಲಿ ಬರೆದೆ. ಆದರೆ ಕನ್ನಡದಲ್ಲಿ ಬರೆಯೋ ಸಮಾಧಾನವೇ ಬೇರೆ. ಭಾವನೆಗಳನ್ನು ಬರಹಗಳಾಗಿಸೋಕೆ ಮಾತೃಭಾಷೆಗಿಂತ ಸುಲಲಿತ ಸಾಧನ ಬೇರೊಂದಿಲ್ಲ. ಬರೆಯಬೇಕೆಂದರೆ different motivations ಇರುತ್ತೆ. ನನಗೆ ನನ್ನ ಹುಡುಗಿಯೇ motivation. ಇದನ್ನ ಅವಳೆಂದು ಓದೋದಿಕ್ಕಗೋಲ್ಲ ಅನ್ನೋದೇ ವಿಷಾದ. ಕಾರಣ, ಅವಳಿಗೆ ಕನ್ನಡ ಬರೋಲ್ಲ. ಎಂದಾದರು ಭಾಷೆಯಲ್ಲದಿದ್ದರೂ ನನ್ನ ಭಾವನೆ ಅರ್ಥ ಮಾಡಿಕೊಳ್ಳುತ್ತಾಳೆ ಅಂತ ಒಂದು hope.
<Hope is a good thing, maybe the best of things, and no good thing ever dies. - Andy Dufrense(The Shawshank Redemption)>


On closing note,


ಜಯಂತ ಕಾಯ್ಕಿಣಿಯವರ ಸಾಲುಗಳಲ್ಲಿರುವ ಹಾಗೆ - ಸಹವಾಸ ದೋಷದಿಂದ ಸರಿಹೊಗಬಹುದೇ ನಾನು, ನನಗಾಗಿಯೇ ಕಾದಿಟ್ಟುಕೋ ಹಟವೊಂದನೂ….

Comments