ಮೊನ್ನೆ ನಿನ್ನೆ ಮತ್ತು ಇಂದು
ಬರಹ
ನಾಳೆಯ ಪುಟಿದೇಳುವ ಕನಸ ಜತೆ
ಸಂಬಂಧಗಳ ಆಸರೆಯ ಮಡಿಲಲ್ಲಿ
ಸಂಸ್ಕಾರದ ಬೆಳಕಿನಲ್ಲಿ
ಚಿಗುರುತಿತ್ತು ಇಂದು
ನಿನ್ನ ಅಭಯ ಕಿರಣಗಳಲ್ಲಿ
ಚಿಗುರಿ ಬೆಳೆಯುತಿತ್ತು
ಅಧಮ್ಯ ಉತ್ಸಾಹದಲ್ಲಿ
ನಾಳಿನ ನಿನ್ನೆಯ
ಸಂಬಂಧಗಳ ಸತ್ತು ಹುಟ್ಟುವ
ಹಕ್ಕು ಭಾಧ್ಯತೆಗಳ ಗೋಜಲುಗಳ ನಡುವೆ
ಪ್ರತಿಕ್ಷಣದಲ್ಲೂ
ಬದುಕ ಬೇಕೆಂಬಾಸೆಯ ಮರೀಚಿಕೆಯ
ಹೊಸ ಮಜಲಿನ
ನಿನ್ನ ಪವಾಡದ ನಿರೀಕ್ಷೆ
ಈ ಏಕಾಂಗೀ ಸುನಾಮಿ
ಪರಭಾರೆಯ ಭೂಕಂಪ
ಸಂಬಂಧಗಳ ಭಯೋತ್ಪಾದಕತೆಯ
ನಡುವೆಯೂ
ಹೊಸ ದಿಗಂತದಲಿನ
ಸಾವಿನಾಚೆಯ
ನಿನ್ನಾಸರೆಯ ಬದುಕು
ಗೋಪಿನಾಥ ರಾವ್ ಬಿ