ಮೋಡ ...
ಕವನ
ಬಗೆ ಬಗೆಯಾಗಿ ಕಾಣುವ ಮೋಡ ನೋಡಿ ಆಶ್ಚರ್ಯದಿಂದ ಅದರ ಹಲವಾರು ರೂಪಗಳನು ಕಂಡು ಮನದಲ್ಲಿ ರೂಪಗೊಂಡ ಮೋಡದ ಬಗ್ಗೆ ಈ ಕವಿತೆ. ನಿಮ್ಮ ಅನಿಸಿಕೆಗೆ ಸ್ವಾಗತ
---------------------
ಹತ್ತಿಯ ಉಂಡೆಯಂತೆ ಎದ್ದು ಬಂದಿದೆ ಮೋಡ
ಕಣ್ತುಂಬ ತುಂಬಿಕೊಂಡು ನೀ ನೋಡ
ಬೆಳಗಿನ ಜಾವದಲಿ
ರವಿ ಕಾಣುವ ಆತುರದಲಿ
ಲಜ್ಜೆ ಬಿಟ್ಟು ಕುಣಿಯುವುದ ನೋಡ
ಕೆಂಪಾಗಿ ನಾಚುವುದ ನೋಡ
ಹಗುರಾದ ಮೈಯಲ್ಲಿ
ಆಗಸದ ಜೊತೆಗೂಡಿ
ಸರಸಾಟವ ಆಡಿ
ಮುಗಿಲನು ಚುಂಬಿಸುವುದ ನೋಡ
ಪ್ರೀತಿಯ ತುಂಬಿಕೊಂಡು
ನಲಿದಾಡುವ ಮೋಡ
ಆಗಸವ ಬಿಡಲೊಲ್ಲೆ ಎಂದು
ಅಳುವುದ ನೋಡ
ಎದೆಯ ಭಾರವ ಹೆಚ್ಚಿಸಿ
ಶ್ಯಾಮವರ್ಣವಾಗಿ
ಗುಡುಗುವುದ ನೋಡ
ರೋಚಕವಾಗಿ ಮಿಂಚುವುದ ನೋಡ
ಪ್ರೇಮದ ವರ್ಷ ಧಾರೆ
ಸುರಿಸುವುದ ನೋಡ
ಕಾಮನ ಬಿಲ್ಲಲಿ
ಭುವಿಗೆ ಮುತ್ತಿಡುವ ಮೋಡ ನೋಡ
---------------------