ಮೋಡ ಚುಂಬನ..ಗಾಢಾಲಿಂಗನ..
ಈ ದಿನಗಳಲ್ಲಿ ಮಳೆಯ ಭಾವೋತ್ಕರ್ಷ ಉಕ್ಕೇರಿ, ಹೊಳೆ ನದಿಗಳೆಲ್ಲೆ ಮೀರಿ ಹರಿಸುತ್ತ ತುಂಬಿ ತುಳುಕುತ್ತಾ ಸಾಗಿವೆ. ಪ್ರಳಯವಾಗದ ಪ್ರಣಯ , ಎಂದೂ ರುದ್ರ ಮನೋಹರ. ಆ ಮೋಡ ಪ್ರಣಯವನ್ನು ಕಟ್ಟಿಡುವ ಯತ್ನ ಈ ಜೋಡಿ ಕವನಗಳಲ್ಲಿ.
ಮೋಡಗಳು ಗಗನದಲಿ ಕಟ್ಟುವ ಶಿಲ್ಪಕಲಾ ವೈಭವವೆ ಅಸಾಧಾರಣ. ಅಂತಿಲ್ಲಿ ಒಂದಕ್ಕಿಂತ ಹೆಚ್ಚು ಮೋಡ ಸಮೂಹ ಪರಸ್ಪರ ಹಾದು, ಸಂಧಿಸಿ, ಮಾತನಾಡಿ, ಅಪ್ಪಿಕೊಂಡು, ಕೆಳೆಯಾಗಿ ಸರಸವಾಡುವ ಚುಂಬನದಾಟದಲಿ ಪ್ರಣಯ ಕೇಳಿಯಾಡುವ ಮೊದಲ ಭಾಗ ' ಮೋಡ ಚುಂಬನ'
ಆದರೆ ಈ ಪ್ರಣಯದಾವೇಗ ಮಳೆ ಪ್ರಳಯದಾವೇಗವಾಗಲಿಕ್ಕೆ ಎಷ್ಟು ಹೊತ್ತು ಬೇಕು? ಮೋಡತಾಡನ ಪ್ರಣಯೋತ್ಕರ್ಷಕೆ ಕಾವೇರಿಸಿ ಬಿಸಿಯಪ್ಪುಗೆಯ ವಿದ್ಯುತ್ಕಾಂತ ಸಮ್ಮಿಲನದ ಸೊಗಡುಡಿಸಿ, ಪರಸ್ಪರರಲ್ಲಿ ಸಂಗಮಿಸಿ ಕರಗಿಹೋಗುವಾಗ ಮಳೆಯಾಗದಿರಲು ಸಾಧ್ಯವೆ? ಆಕರ್ಷಣೆಯ ಘರ್ಷಣೆ ಮಿಂಚಾಗಿ ಹೊರಳದಿರಲು , ಗುಡುಗು - ಸಿಡಿಲಾಗಿ ಸುಳಿಯದಿರಲು ಆದೀತೆ? ಆ ಸಂಕ್ರಮಣವನ್ನೆಲ್ಲ ಒಟ್ಟುಗೂಡಿಸಿ ಬೆಸೆದ ಭಾವ ಎರಡನೆ ಭಾಗವಾದ ' ಗಾಢಾಲಿಂಗನ'ದಲ್ಲಿ ಮೂಡಿದೆ
' 1. ಮೋಡ ಚುಂಬನ.....'
________________
ಚುಕ್ಕೆ ಮೂಡದಲೆ ಇರುಳ
ಮುಗಿಲರೆ ಸಂಜೆಗೆ ಕೊರಳ
ಅಪ್ಪಿದ ಆಗಸದಲಿ ಸರಳ
ಮೇಘದಲೆ ಮುತ್ತಿನ್ಹರಳಾ!
ಗುಡಿ ಗೋಪುರ ಕಟ್ಟಿದಂತೆ
ಮೋಡಗಳೆ ಚಿತ್ತಾರವಂತೆ
ಸುಯ್ಗಾಳಿಗೆದ್ದ ತರಗಲೆಗೆ
ಧೂಳೆಬ್ಬಿಸಿ ನರ್ತಿಸೊಬಗೆ!
ದೂರದಲೆಲ್ಲೊ ಚಂದ್ರಮನ
ಬೆಳ್ಬೆಳದಿಂಗಳ್ಹಾಲ್ದೊರೆತನ
ಚೆಲ್ಲಾಡಿದ ಬೆಳಕಿನ ಹುತ್ತ
ಕಣೆ ಕಟ್ಟಿದೆ ಮೋಡ ಸುತ್ತ!
ಬೆಳ್ವಲದಾ ಪ್ರಜ್ವಲ ವೈಭವ
ದಿಗ್ಭ್ರಮಿಸಿತೆ ಜ್ವಾಲಾಹಲವ
ವಿನ್ಯಾಸವೆ ಅದ್ಭುತವೆ ಸರಿ
ಗಗನದಲೆ ಕಟ್ಟಿದಾ ನಗರಿ!
ಆ ಹೊತ್ತಿಗೆ ಆವಾಹನ ದಿನ
ಎಲ್ಲಿತ್ತೋ ಆವೇಶದ ಸದನ
ಸರಸರ ಹತ್ತಿರಕೆ ಸರಿದಾಡಿ
ನೆಗೆದು ಮೋಡ ಕೆಳೆ ಕೂಡಿ!
'2...........ಗಾಢಾಲಿಂಗನ'
________________
ಧುತ್ತನೆ ಘನ ಗಾಡಾಲಿಂಗನ
ಅಪ್ಪಿದಲೆ ಮೋಡ ಚುಂಬನ
ಸುರುಳಿ ಸುತ್ತಿ ಸರ್ಪ ಸಖ್ಯ
ವರಿಸಿದಂತೆ ಸುಮೇಘದೃಶ್ಯ!
ಆಲಿಂಗನದಲಿರಲು ರೌದ್ರತೆ
ಸಲ್ಲೇಖನದಂತೆ ಮುದ ಕಥೆ
ಮೈ ಮುರಿಸಿದ ಬಿಗಿಯಪ್ಪಿಗೆ
ಮಳೆಯಾಗದಿರದೇ ತಪ್ಪಿಗೆ!
ಸಮ್ಮಿಲನದ ಶಾಖೋತ್ಕರ್ಷ
ಸ್ಪರ್ಶಕೆರಗಿದ ಕಿಡಿ ಸಂಘರ್ಷ
ಚುಂಬನ ತಾಡನ ಸುಹರ್ಷ
ಸಿಡಿಲ್ಗುಡುಗು ಮಿಂಚರಿಸೀಶ!
ಹಿಡಿಯಲೆಷ್ಟೊತ್ತಾನೆ ರಸಿಕ
ಬಿಟ್ಟು ಬಿಡದಲೇ ಒಳ ಸುಖ
ಕಡೆ ಬಿಟ್ಟಾಗಲೆ ವರ್ಷ ವಾಕ
ಸುಖರತಿ ಫಲಿತ ಮಳೆಸಖ!
ವಿಳಂಬಿತ ವಿಜೃಂಭಿತ ರತಿ
ಧಾರಾಕಾರದ ಮಳೆ ಗರತಿ
ಪ್ರಣಯಿಗಳಲಿ ಹಚ್ಚಿ ಪ್ರಣತಿ
ಪ್ರೇಮ ಕಾಮೋದ್ರೇಕಕೆ ಸ್ವಸ್ತಿ!
ಧನ್ಯವಾದಗಳೊಂದಿಗೆ,
ನಾಗೇಶ ಮೈಸೂರು
Comments
ಉ: ಮೋಡ ಚುಂಬನ..ಗಾಢಾಲಿಂಗನ..
In reply to ಉ: ಮೋಡ ಚುಂಬನ..ಗಾಢಾಲಿಂಗನ.. by Vasant Kulkarni
ಉ: ಮೋಡ ಚುಂಬನ..ಗಾಢಾಲಿಂಗನ..
ಉ: ಮೋಡ ಚುಂಬನ..ಗಾಢಾಲಿಂಗನ..
In reply to ಉ: ಮೋಡ ಚುಂಬನ..ಗಾಢಾಲಿಂಗನ.. by kavinagaraj
ಉ: ಮೋಡ ಚುಂಬನ..ಗಾಢಾಲಿಂಗನ..
ಉ: ಮೋಡ ಚುಂಬನ..ಗಾಢಾಲಿಂಗನ..
In reply to ಉ: ಮೋಡ ಚುಂಬನ..ಗಾಢಾಲಿಂಗನ.. by venkatb83
ಉ: ಮೋಡ ಚುಂಬನ..ಗಾಢಾಲಿಂಗನ..
ಉ: ಮೋಡ ಚುಂಬನ..ಗಾಢಾಲಿಂಗನ..
In reply to ಉ: ಮೋಡ ಚುಂಬನ..ಗಾಢಾಲಿಂಗನ.. by ಗಣೇಶ
ಉ: ಮೋಡ ಚುಂಬನ..ಗಾಢಾಲಿಂಗನ..