ಮೋದಿ ಜನಪ್ರಿಯತೆಗೆ ಸಾಕ್ಷಿಯಾದ ಒಂದು ಘಟನೆ
ಮೋದಿ ಜನಪ್ರಿಯತೆಗೆ ಸಾಕ್ಷಿಯಾದ ಒಂದು ಘಟನೆ
ತಿಂಗಳ ಹಿಂದೆ ನಮ್ಮ ಸಂಬಂಧಿಕರೊಬ್ಬರ ಮನೆಗೆ ಹೋಗಿದ್ದೆ.ಅಲ್ಲೊಂದು ಹೆಣ್ಣು ಮಗು ಇತ್ತು.ಹೆಸರು ಪೂರ್ವಿ.ವಯಸ್ಸು ಅವಳ ತಂದೆ ತಿಳಿಸಿದಂತೆ ಮೂರು ವರ್ಷ.ಅವಳ ತಂದೆ ಮತ್ತು ನಾನು ಕುಶಲೋಪಚಾರಿಯಲ್ಲಿ ತೊಡಗಿರುವಾಗ ಪೂರ್ವಿಯ ಕಣ್ಣುಗಳು ಪಕ್ಕದಲ್ಲಿಟ್ಟಿದ್ದ ನನ್ನ ಮೊಬೈಲ್ ಕಡೆ ನೆಟ್ಟಿತು.ನನ್ನ ಅಪ್ಪಣೆಗು ಕಾಯದೆ ತನ್ನದೇ ಮೊಬೈಲ್ ಎಂಬಂತೆ ಎತ್ತಿಕೊಂಡು 'ಹೋಮ್'ಬಟನ್ ಪ್ರೆಸ್ ಮಾಡಿದಳು.ಬಟನ್ ಹೊತ್ತಿದಾಗ ಬಂದ ಬೆಳಕಿಗೆ ಅವಳ ಮುಖ ಅರಳಿ ನಾಲಿಗೆಯು 'ಹೋ...ಮೋದಿಜಿ'ಎಂಬ ಧ್ವನಿಯನ್ನು ಹೊರಡಿಸಿತು.ಆಗ ನನಗೆ ಮೋದಿಯವರ ಫೋಟೋವನ್ನು ನನ್ನ ಮೊಬೈಲ್ ನ 'ಸ್ಕ್ರೀನ್ ಸೇವರ್' ಆಗಿ ಹಾಕಿಕೊಂಡಿದ್ದು ನೆನಪಿಗೆ ಬಂತು.ನಾನು ಅವಳ ಅಪ್ಪನ ಕಡೆ ತಿರುಗಿ,'ಪೂರ್ವಿಗೆ ಮೋದಿ ಮೊಗದ ಪರಿಯವಾಗಿದ್ದು ಹೇಗೆ..?'ಎಂದು ಕೇಳಿದೆ.ಅದಕ್ಕವರು,'ಎಲ್ಲಾ ಸ್ವಚ್ಛ ಭಾರತದ ಪ್ರಭಾವ' ಎಂದರು.ನಾನು,'ಸ್ವಲ್ಪ ಬಿಡಿಸಿ ಹೇಳಿ'ಎಂದೆ.ಆಗ ಅವರು,' ಪೂರ್ವಿ ನನ್ನ ಜೊತೆ ಕೂತು ಟಿವಿ ನೋಡೋದನ್ನು ಈಗ ಕಲಿತಿದ್ದಾಳೆ.ಪ್ರತಿ ಬಾರಿ ಸ್ವಚ್ಛ ಭಾರತದ ಜಾಹೀರಾತು ಬರುವಾಗ,ಮಗು... ಅವರು ಮೋದಿಜಿ ನಮ್ಮ ದೇಶದ ಪ್ರಧಾನಿಗಳು ಎಂದು ಹೇಳುತ್ತಿರುತ್ತೇನೆ.ಹೀಗಾಗಿ ಪೂರ್ವಿ ಮೋದಿಯನ್ನು ಎಲ್ಲಿ ಕಂಡರು ಗುರುತಿಸುವಷ್ಟು ಸಾಮರ್ಥ್ಯ ಪಡೆದಿದ್ದಾಳೆ'ಎಂದರು.ಪುಟಾಣಿಯೊಬ್ಬಳ ಬಾಯಲ್ಲಿ ಮೋದಿಯ ಹೆಸರು ಕೇಳಿ ನನಗೆ ಆಶ್ಚರ್ಯ ದ ಜೊತೆಗೆ ಸಂತೋಷವು ಆಯಿತು.
-@ಯೆಸ್ಕೆ
Comments
ಉ: ಮೋದಿ ಜನಪ್ರಿಯತೆಗೆ ಸಾಕ್ಷಿಯಾದ ಒಂದು ಘಟನೆ
:)