ಮೋದಿ ರಣತಾಂತ್ರಿಕ ಕ್ಷಮತೆ – ಪೂರ್ಣಯುದ್ಧ ಇಲ್ಲದೆಯೇ ಪಾಕ್ ವಿರುದ್ಧ ಗೆಲುವು

ಸಂಯಮದ ಹಾದಿಯನ್ನು ಅನುಸರಿಸುವ ಮೂಲಕ, ಅಧಿಕಾರವನ್ನು ಉದ್ದೇಶಿತ ಗುರಿಗೆ ಉಪಯೋಗಿಸುವ ಮೂಲಕ, ಮೋದಿ ಸಣ್ಣ ಕದನವನ್ನು ಮಾತ್ರವೇ ಗೆದ್ದಿಲ್ಲ. ಭಾರತವನ್ನು ಒಂದು ಜವಾಬ್ದಾರಿಯುತ, ಏಳಿಗೆ ಹೊಂದುತ್ತಿರುವ ಜಾಗತಿಕ ಶಕ್ತಿಯಾಗಿ ಸ್ಥಾಪಿಸಿದ್ದಾರೆ.
ಭಾರತೀಯ ಇತಿಹಾಸದ ಇತ್ತೀಚಿನ ವರ್ಷಗಳಲ್ಲಿ ಕೆಲವು ಕ್ಷಣಗಳು ಮಾತ್ರವೇ ಕಾರ್ಯತಂತ್ರಗಳ ಸ್ಪಷ್ಟತೆಯಿಂದ ಮತ್ತು ನೈತಿಕ ಬಲದೊಂದಿಗೆ ಹೊಳೆಯುವುದನ್ನು ಗುರುತಿಸಬಹುದು. ಪಾಕಿಸ್ತಾನದ ದುಸ್ಸಾಹಸಕ್ಕೆ ಭಾರತದ ಇತ್ತೀಚಿನ ಪ್ರತೀಕಾರ ಇಂತಹ ಒಂದು ಗಳಿಗೆ. ಈ ಕಲಹಕ್ಕೆ ಮೂಲ ಕಾರಣವಾದ, ಪೆಹಲ್ಕಾಂನಲ್ಲಿ ಪ್ರವಾಸಿಗರ ಮೇಲೆ ಭಯೋತ್ಪಾದಕರು ನಡೆಸಿದ ಭೀಕರ, ಅಮಾನುಷ ದಾಳಿ, ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದೆ. ಈ ಘಟನೆಯ ನಂತರ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಭಾರತ ತೋರಿದ ಸಂಯಮ ಮತ್ತು ಕ್ರಿಯಾಶೀಲತೆ ಇನ್ನೂ ಮೆಚ್ಚುವಂತಹುದು. ಹಿಂದಿನ ನಾಯಕರಂತೆ ಭಾವನಾತ್ಮಕವಾಗಿ ಸೇಡು ತೀರಿಸಿಕೊಳ್ಳುವ ಆಗ್ರಹಗಳಿಗೆ ಮಣಿದು ಪೂರ್ಣ ಪ್ರಮಾಣದ ಯುದ್ಧಕ್ಕೆ ಮುಂದಾಗದೇ, ಮೋದಿಲೆಕ್ಕಾಚಾರದೊಂದಿಗೆ ಈ ಪ್ರಕ್ಷುಬ್ಧತೆಯಿಂದ ಪಾರು ಮಾಡಿದ್ದಾರೆ. ಮೌನವಾಗಿ, ದಕ್ಷತೆಯಿಂದ ವಾರ್ ರೂಂನಿಂದಲೇ ಕಾರ್ಯ ನಿರ್ವಹಿಸಿದ ಮೋದಿ, ಸೇನೆ, ನೌಕಾದಳ ಮತ್ತು ವಾಯುದಳದ ಮುಖ್ಯಸ್ಥರೊಡನೆ ಸಂಯೋಜಿತ ಸಮಾಲೋಚನೆ ನಡೆಸಿ, ೭೪ ಗಂಟೆಗಳ ಒಳಗಾಗಿ ನಿರ್ದಿಷ್ಟ ಗುರಿಗಳ ಮೇಲೆ ದಾಳಿ ನಡೆಸುವ ಮೂಲಕ ಗಡಿಯಾಚೆಗಿನ ಮತ್ತು ಒಳಗಿನ ಭಯೋತ್ಪಾದಕರ ಆಡಗುತಾಣಗಳನ್ನು ಧ್ವಂಸಗೊಳಿಸಿರುವುದು, ಪಾಕಿಸ್ತಾನದ ಪರೋಕ್ಷ ಸೌಕರ್ಯಗಳನ್ನು ನಾಶಪಡಿಸಿದ್ದು, ಅದೇ ವೇಳೆ ಪ್ರಾದೇಶಿಕ ಕದನವಾಗುವುದನ್ನೂ ತಪ್ಪಿಸಿದೆ.
ಇದು ಕೇವಲ ಸೇನಾಬಲದ ಪ್ರದರ್ಶನ ಮಾತ್ರವೇ ಆಗಿರದೇ ಸಂಯಮಪೂರ್ಣ ಕಾರ್ಯತಂತ್ರ ಮತ್ತು ನೈತಿಕ ಜವಾಬ್ದಾರಿಯಿಂದ ಕೈಗೊಂಡಿರುವ ಕಾರ್ಯವಾಗಿದೆ. ಭಾರತದ ಸೇನೆಯು ಪಾಕಿಸ್ತಾನದ ನಾಗರಿಕರನ್ನಾಗಲೀ, ಮಿಲಿಟರಿ ನೆಲೆಗಳನ್ನಾಗಲೀ ಉದ್ದೇಶಿಸಿ ದಾಳಿ ನಡೆಸಿಲ್ಲ. ಇಲ್ಲಿ ಸ್ಪಷ್ಟ ಹಾಗೂ ನಿರ್ದಿಷ್ಟವಾದ ಸಂದೇಶವನ್ನು ರವಾನಿಸಿದ್ದು, ಇದು ಯುದ್ಧವಲ್ಲ ಭಯೋತ್ಪಾದನೆಯ ವಿರುದ್ಧ ಎಚ್ಚರಿಕೆ ಎಂದು ಪಾಕಿಸ್ತಾನಕ್ಕೆ ತಿಳಿಸಲಾಗಿದೆ.
ಹಿನ್ನೆಲೆಯಲ್ಲಿ ಪಾಕಿಸ್ತಾನದ ನಾಯಕತ್ವವು ಆಂತರಿಕವಾಗಿ ಕುಸಿದುಬಿದ್ದಿದೆ. ಡಿಜಿಎಂಒ ಹಂತದಿಂದ ಕೇಳಿಬಂದ ಯುದ್ಧ ವಿರಾಮ ಆಗ್ರಹಗಳು, ಸೇಡಿನ ಕ್ರಮಗಳನ್ನು ಸ್ಥಗಿತಗೊಳಿಸುವ ಬೇಡಿಕೆಗಳೊಂದಿಗೇ ಅಥವಾ ಅಮೆರಿಕಕ್ಕೆ ಪಾಕಿಸ್ತಾನವು ಉಸಿರಾಡಲು ಅವಕಾಶ ನೀಡುವಂತೆ ಬೇಡಿಕೊಂಡ ಸನ್ನಿವೇಶದವರೆಗೂ ಈ ಪರಿಸ್ಥಿತಿಯನ್ನು ಗಮನಿಸಬಹುದು. ಕೆಲವೇ ದಿನಗಳ ಒಳಗಾಗಿ ಅಣ್ವಸ್ತ್ರ ಹೊಂದಿರುವ ದೇಶವೊಂದು ಮಂಡಿಯೂರಿ, ಯಾವುದೇ ಅಧಿಕೃತ, ಔಪಚಾರಿಕ ಯುದ್ಧ ಘೋಷಣೆ ಮಾಡದೇ ಇರುವುದು ಕೇವಲ ಎದುರಾಳಿ ಸೇನೆಯ ಯಶಸ್ಸು ಮಾತ್ರವೇ ಅಲ್ಲ, ರಾಜ ತಾಂತ್ರಿಕ ಹಾಗೂ ರಣತಾಂತ್ರಿಕ ಗೆಲುವು ಎಂದು ಹೇಳಬಹುದು. ವಿಡಂಬನೆ ಎಂದರೆ, ಭಾರತದ ನೈತಿಕ ಔನತ್ಯವನ್ನು ಜಾಗತಿಕ ಸಮುದಾಯವು ಸೂಕ್ತವಾಗಿ ಗುರುತಿಸಿಲ್ಲ. ಇದೇ ಪಶ್ಚಿಮ ರಾಷ್ಟ್ರಗಳು ಮಾನವ ಹಕ್ಕುಗಳ ಬಗ್ಗೆ ಸಮತೂಕದ ನೀತಿಗಳಿಗಾಗಲೀ ಸದಾ ವಾದ ಮಾಡುತ್ತಿದ್ದರೂ, ಭಾರತದ ಶಿಸ್ತು ಮತ್ತು ಸಂಯಮವನ್ನು ಪ್ರಶಂಸಿಸುವಲ್ಲಿ ಮೌನ ವಹಿಸಿರುವುದು ವಿಡಂಬನೆಯೇ ಸರಿ. ಆದರೆ ಭಾರತದ ನೈತಿಕ ನಿಲುವು ಸ್ಪಷ್ಟವಾಗಿದೆ. ಮಾನವೀಯತೆಯನ್ನು ಮಾನ್ಯ ಮಾಡುವ ಯಾವುದೇ ದೇಶವಾದರೂ, ಭಯೋತ್ಪಾದನೆಯನ್ನು ಪೋಷಿಸುವ ನೆರೆ ರಾಷ್ಟ್ರವನ್ನು ಸಹಿಸಿಕೊಳ್ಳಲಾಗುವುದಿಲ್ಲ.
ಇವೆಲ್ಲದರ ನಡುವೆ, ಭಾರತದ ವಿರೋಧ ಪಕ್ಷಗಳ ದ್ವಂದ್ವ ನಿಲುವುಗಳನ್ನು ಅಲಕ್ಷಿಸಲಾಗುವುದಿಲ್ಲ - ಅದರಲ್ಲೂ ಕಾಂಗ್ರೆಸ್ ಪಕ್ಷದ ದ್ವಂದ್ವ ನೀತಿಯನ್ನು ೧೯೭೧ರಲ್ಲಿ ಇದೇ ಪಕ್ಷದ ಸರ್ಕಾರವೇ ಪಾಕಿಸ್ತಾನದ ಮೇಲೆ ಗೆಲುವು ಸಾಧಿಸಿ ಬಾಂಗ್ಲಾದೇಶ ವಿಮೋಚನೆಗೆ ಕಾರಣರಾದ ಇಂದಿರಾಗಾಂಧಿಯನ್ನು ವೈಭವೀಕರಿಸುತ್ತದೆ. ಇದು ಸಮರ್ಥನೀಯವೂ ಹೌದು. ಆದರೆ ನರೇಂದ್ರ ಮೋದಿ ಇಂತಹುದೇ ರಾಜತಾಂತ್ರಿಕತೆಯನ್ನು ತೋರಿದಾಗ, ವಿರೋಧ ಪಕ್ಷಗಳು ಈ ಗೆಲುವಿನ ಶ್ರೇಯ ಸೇನೆಗೆ ಮಾತ್ರ ಸಲ್ಲಬೇಕು ಎಂದು ವಾದಿಸುತ್ತವೆ.
ಈ ರೀತಿಯ ವಿರೋಧಾಭಾಸಗಳು ಸಾರ್ವಜನಿಕರ ನಡುವೆ, ಕಾಂಗ್ರೆಸ್ ಪಕ್ಷವು ಭಾರತದ ಗೆಲುವಿಗಿಂತಲೂ, ಮೋದಿಯನ್ನು ಹೀಗಳೆಯುವುದರ ಬಗ್ಗೆಯೇ ಹೆಚ್ಚು ಆಸಕ್ತವಾಗಿದೆ ಎಂಬ ಭಾವನೆಯನ್ನು ಮತ್ತಷ್ಟು ಗಟ್ಟಿಗೊಳಿಸಿದೆ. ಈ ರಾಜಕೀಯ ಸಂಕುಚಿತ ಮನೋಭಾವವನ್ನು ಜನರು ಗಮನಿಸದೆ ಇರಲಾರರು. ಇದು ಪಕ್ಷವನ್ನು ರಾಷ್ಟ್ರೀಯತೆಯ ಭಾವನೆಗಳಿಂದ ಮತ್ತಷ್ಟು ದೂರ ತಳ್ಳುತ್ತದೆ. ಜನರು ರಾಷ್ಟ್ರೀಯ ಬಿಕ್ಕಟ್ಟಿನ ವೇಳೆ ಮೋದಿ ತೋರಿದ ಪ್ರಾಮಾಣಿಕತೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿರುತ್ತಾರೆ.
ಕೊನೆಯದಾಗಿ, ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವವು ಈ ಗೆಲುವಿಗೆ ಪೂರ್ಣ ಶ್ರೇಯ ಪಡೆಯುತ್ತದೆ, ಇದು ಕೇವಲ ಯಶಸ್ವಿ ಮಿಲಿಟರಿ ಕಾರ್ಯಾಚರಣೆಗೆ ಮಾತ್ರವೇ ಅಲ್ಲದೆ, ಭಾರತವು ಸಂಯಮಪೂರ್ಣವಾಗಿ, ನೈತಿಕತೆಯನ್ನು ಜಾಗತಿಕ ಮಟ್ಟದಲ್ಲಿ ಎತ್ತಿಹಿಡಿದ ಕಾರಣಕ್ಕಾಗಿ, ಸಂಯಮದ ಹಾದಿಯನ್ನು ಅನುಸರಿಸುವ ಮೂಲಕ, ಅಧಿಕಾರವನ್ನು ಉದ್ದೇಶಿತ ಗುರಿಗೆ ಉಪಯೋಗಿಸುವ ಮೂಲಕ, ಮೋದಿ ಸಣ್ಣ ಕದನವನ್ನು ಮಾತ್ರವೇ ಗೆದ್ದಿಲ್ಲ ಭಾರತವನ್ನು ಒಂದು ಜವಾಬ್ದಾರಿಯುತ, ಏಳಿಗೆ ಹೊಂದುತ್ತಿರುವ ಜಾಗತಿಕ ಶಕ್ತಿಯಾಗಿ ಸ್ಥಾಪಿಸಿದ್ದಾರೆ.
ಕೃಪೆ- ಬಿವಿಸೀ, ‘ಕರಾವಳಿ ಅಲೆ’ ಸಂಪಾದಕೀಯ