ಮೋದಿ ಸರಕಾರಕ್ಕಿಲ್ಲ 'ಹನಿಮೂನ್ ಪಿರಿಯಡ್'ಭಾಗ್ಯ

ಮೋದಿ ಸರಕಾರಕ್ಕಿಲ್ಲ 'ಹನಿಮೂನ್ ಪಿರಿಯಡ್'ಭಾಗ್ಯ

ಮೋದಿಜಿ ಸರಕಾರಕ್ಕಿಲ್ಲ' ಹನಿಮೂನ್ ಪಿರಿಯಡ್'ಭಾಗ್ಯ

ನಿನ್ನೆ ರಾಹುಲ್ ಗಾಂಧಿಯವರು ಜಾರ್ಕಂಡ್ ನ ಚುನಾವಣಾ ರ್ಯಾಲಿಯೊಂದರಲ್ಲಿ ಮಾಡಿದ ಭಾಷಣವನ್ನು ಕೇಳಿದೆ.ನೀವು... ರಾಹುಲ್ ಗಾಂಧಿಯ ಭಾಷಣ ಬೇರೆ ಕೇಳ್ತೀರಾ. .? ಅಂತ ನನ್ನ ಪ್ರಶ್ನೆ ಮಾಡಬಹುದು. .ಅದಕ್ಕೆ ನನ್ನ ಉತ್ತರ...ನೀವೂ ಕೂಡ ಕೇಳಿ ಎನ್ನುವುದು. ಯಾಕಂದ್ರೆ ಅವರ ಭಾಷಣ ನಿಮ್ಮ ಆರೋಗ್ಯವನ್ನು ಚೆನ್ನಾಗಿಡುತ್ತದೆ.ಅರ್ಥಾತ್,ಅವರು ನಿಮ್ಮನ್ನು ಸಾಕಷ್ಟು ನಗಿಸುತ್ತಾರೆ.ಅದೂ ಸೀರಿಯಸ್ಸಾಗಿ... !!ಅವರ ಇಡಿಯ ಭಾಷಣ ಆರು ತಿಂಗಳ ಮೋದಿ ಸರಕಾರವನ್ನು ಟೀಕಿಸಲು ಮೀಸಲಾಗಿತ್ತು.ನನಗೆ ಅವರ ಭಾಷಣ ಕೇಳಿ ಗೊಂದಲವಾಯಿತು... ಚುನಾವಣೆ ನಡೆಯುತ್ತಿರುವುದು ಜಾರ್ಕಂಡ್ ವಿಧಾನಸಭೆಗ..?ಅಥವಾ ಲೋಕಸಭೆಗ..? ಅಂತ.ಇವರು ರಾಜ್ಯ ವಿಧಾನಸಭೆಯ ಚುನಾವಣಾ ರ್ಯಾಲಿಯಲ್ಲಿ ಅಧಿಕಾರದಲ್ಲಿರುವ ಮತ್ತು ಕಾಂಗ್ರೆಸ್ ಕೂಡ ಪಾಲುದಾರರಾಗಿರುವ ಮಿತ್ರಪಕ್ಷ ಜೆಎಂಎಂನ ಹೇಮಂತ್ ಸೊರೇನ್ ನೇತೃತ್ವದ ಸರ್ಕಾರದ ಸಾಧನೆಯನ್ನು ಹೊಗಳುವ ಯಾ ಟೀಕಿಸುವ ಬದಲು ಮೊನ್ನೆ ತಾನೆ 'ಹನಿಮೂನ್ ಪಿರಿಯಡ್' ಎಂದು ಕರೆಯುವ ಆರು ತಿಂಗಳ ಅವಧಿ ಮುಗಿಸಿದ ಹಾಲಿ ಕೇಂದ್ರ ಸರ್ಕಾರವನ್ನು ಟೀಕಿಸುತ್ತಿದ್ದಾರೆ ಎಂದರೆ ಏನನ್ನಬೇಕು ಇವರ ಬುದ್ಧಿವಂತಿಕೆಗೆ!?.ಯಾವುದೇ ಸರಕಾರ ಅಸ್ತಿತ್ವಕ್ಕೆ ಬಂದ ಆರು ತಿಂಗಳವರೆಗಿನ ಅವಧಿಯನ್ನು 'ಹನಿಮೂನ್ ಪಿರಿಯಡ್' ಅಂತ ಕರೆಯುತ್ತಾರೆ.ನೂತನ ಸರಕಾರವೊಂದು ಟೇಕ್ ಆಫ್ ಆಗಲು ಪ್ರತಿಪಕ್ಷಗಳು ಅಷ್ಟು ಅವಧಿ ನೀಡುತ್ತದೆ.ಸಾಮಾನ್ಯವಾಗಿ ಪ್ರತಿಪಕ್ಷಗಳು ಈ ಅವಧಿಯಲ್ಲಿ ಹೊಸ ಸರಕಾರವನ್ನು ಟೀಕೆ ಮಾಡೋದಿಲ್ಲ.ಒಂದು ರೀತಿಯಲ್ಲಿ ರಿಯಾಯಿತಿ ಕೊಡೋದು ಅನ್ನಬಹುದು. ಆದರೆ ಮೋದಿ ಸರಕಾರಕ್ಕೆ ಅ ಭಾಗ್ಯವಿಲ್ಲ.ಅಧಿಕಾರಕ್ಕೆ ಬಂದ ಮೊದಲ ದಿನದಿಂದಲೇ ಪ್ರತಿಪಕ್ಷಗಳು ದಾಳಿ ನಡೆಸುತ್ತ ಬಂದಿವೆ.ಆದರೆ ಅವೆಲ್ಲವು ಶಿವಾಜಿ ಸಾಮ್ರಾಜ್ಯದ ಮೇಲೆ ಅಫ್ಜಲ್ ಖಾನ್ ನಡೆಸಿದ ನಿರರ್ಥಕ ದಾಳಿಯಾಗಿದ್ದವು.ಮೋದಿ ಯಾವತ್ತೂ ತಮ್ಮ ಆರು ತಿಂಗಳ ಅವಧಿಯನ್ನು ಹನಿಮೂನ್ ಟೈಮ್ ಎಂದು ಭಾವಿಸಿರಲಿಲ್ಲ.ಅದನ್ನ ಎಕ್ಸಾಮ್ ಟೈಮ್ ಆಗಿ ಸ್ವೀಕರಿಸಿದ್ದರು.ಸ್ವತಂತ್ರ ಭಾರತದ ಎಲ್ಲಾ ಪ್ರಧಾನಿಗಳ ಮೊದಲ ಆರು ತಿಂಗಳ ಸಾಧನೆಯನ್ನು ಮೋದಿಯವರ ಸಾಧನೆಯ ಜೊತೆ ಹೋಲಿಸಿ ನೋಡಿ ಆಗ ನಿಮಗೆ ಮೋದಿ ಎಲ್ಲಿದ್ದಾರೆ ಅನ್ನೋದು ಗೊತ್ತಾಗುತ್ತದೆ.ಹೊಸದಾಗಿ ಅಧಿಕಾರಕ್ಕೆ ಬಂದವರು ತಮ್ಮ ಹುದ್ದೆಯ ಅಧಿಕಾರ ವ್ಯಾಪ್ತಿಯನ್ನು ಅರ್ಥ ಮಾಡಿಕೊಳ್ಳುವಷ್ಟರಲ್ಲಿ ವರ್ಷಗಳೇ ಕಳೆದಿರುತ್ತಾರೆ.ಆದರೆ ಮೋದಿ ಕಳೆದ ಆರು ತಿಂಗಳಲ್ಲಿ ಸಾಲು ಸಾಲು ಯೋಜನೆ ಜಾರಿ ಮಾಡಿದ್ದಾರೆ.ಹಲವಾರು ದೇಶಗಳಿಗೆ ಭೇಟಿ ಕೊಟ್ಟಿದ್ದಾರೆ.ಲೆಕ್ಕವಿಲ್ಲದಷ್ಟು ಸಭೆಗಳು ನಡೆಸಿದ್ದಾರೆ.ಹಲವು ಮಹತ್ವದ ಒಪ್ಪಂದಗಳಿಗೆ ಸಹಿ ಹಾಕಿದ್ದಾರೆ. ಪರಿಹಾರ ಕಾರ್ಯಗಳು,ರಾಜ್ಯಪ್ರವಾಸ,ಶಿಲಾನ್ಯಾಸ ಮುಂತಾದ ಚಟುವಟಿಕೆಗಳಲ್ಲಿ ಕ್ರಿಯಾಶೀಲರಾಗಿದ್ದಾರೆ,ಹತ್ತಾರು ನಿಯೋಗಗಳ ಜೊತೆ ಮಾತುಕತೆ ನಡೆಸಿದ್ದಾರೆ.ಎಲ್ಲದಕ್ಕು ಹೆಚ್ಚಾಗಿ ಜಗತ್ತು ಇಂದು ಭಾರತದ ಕಡೆ ನೋಡುವ ಹಾಗೆ ಮಾಡಿದ್ದಾರೆ.ಟೀಕೆ ಮಾಡೋದು ಪ್ರತಿಪಕ್ಷಗಳ ಕರ್ತವ್ಯ.ಆದರೆ ಒಂದು ದಿನದ ಸಮಯ ನೀಡಿ ಎದುರಿಗಿರುವ ದೊಡ್ಡ ಬೆಟ್ಟವನ್ನು ನೆಲಸಮ ಮಾಡಿ ತೋರಿಸು ಎಂದರೆ ಹೇಗೆ..?ಇಷ್ಟಕ್ಕೂ ಮೋದಿಯವರ ಕೈಗೆ ಈಗ ಪ್ರತಿಪಕ್ಷದಲ್ಲಿರುವವರು ಕೊಟ್ಟು ಹೋಗಿದ್ದು ಆರೋಗ್ಯವಂತ ಭಾರತವನ್ನಲ್ಲ,ರೋಗಗ್ರಸ್ತ ಭಾರತವನ್ನು.ಮುಲಾಮು ತಯಾರಿಸಿದ್ದಾರೆ.ಒಂದೊಂದೇ ಭಾಗವನ್ನು ರೋಗಮುಕ್ತ ಮಾಡುತ್ತಿದ್ದಾರೆ ಸ್ವಲ್ಪ ಕಾಯಿರಿ.

-@ಯೆಸ್ಕೆ